

ರೋಣ: ಪಟ್ಟಣದ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಾದಾಮಿಯ ಶ್ರೀ ಗುರು ಮನೋಚಾರ್ಯ ಪ್ರತಿಷ್ಠಾನದ ವ ತಿಯಿಂದ ಗುರುಸ್ಮರಣೆ ಹಾಗೂ ಬಿಇ.ಡಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಉಪನ್ಯಾಸವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಅವರು ಪ್ರಶಿಕ್ಷಣಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೇಗೆ ಆಸಕ್ತಿ ಮೂಡಿಸಬೇಕು. ವಿಜ್ಞಾನ, ಗಣಿತ ಸೇರಿದಂತೆ ವಿವಿಧ ವಿಷಯಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿ ವಿವಿಧ ಶೈಲಿಯ ಬೋಧನಾ ತಂತ್ರಗಳನ್ನು ಬಳಸಿ ಹೇಗೆ ಬೋಧಿಸಬೇಕು ಎಂಬುದರ ಮಾಹಿತಿ ನೀಡಿದರು. ಬಾದಾಮಿಯ ಎಸ್‌ಜೆಎಂಕೆ ಪದವಿ ಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಆರ್.ಬಿ. ಸಂಕದಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕೊಣ್ಣೂರು ಗ್ರಾಮದ ಮೌನೇಶ್ವರ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ವೀರಣ್ಣ ಮನೋಚಾರ್ಯ, ಬಾದಾಮಿ ಸಿರಿಗಂಧ ಸಂಸ್ಕೃತಿ ಬಳಗದ ಅಧ್ಯಕ್ಷ ದಾಜಿಬಾ ಜಗದಾಳೆ, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ವೈ.ಎನ್. ಪಾಪಣ್ಣವರ ಇತರರು ಇದ್ದರು.