ಏ.೧೨ರಿಂದ ಗುರುಸಿದ್ಧವೀರೇಶ್ವರಸ್ವಾಮಿ ಜಾತ್ರಾ ಮಹೋತ್ಸವ

thapovana
Published on

ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಶ್ರೀ ತಪೋಕ್ಷೇತ್ರ ಮನೆಹಳ್ಳಿಯಲ್ಲಿ ಶ್ರೀ ಗುರುಸಿದ್ಧವೀರೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಏ.೧೨ರಿಂದ ೧೪ರವರೆಗೆ ಅದ್ಧೂರಿಯಾಗಿ ಜರುಗಲಿದೆ ಎಂದು ಕ್ಷೇತ್ರಾಧ್ಯಕ್ಷ ಶ್ರೀ ಮಹಾಂತ ಶಿವಲಿಂಗಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.೧೩ರಂದು ಬೆಳಗ್ಗೆ ೮ ಗಂಟೆಗೆ ಧ್ವಜಾರೋಹಣ, ಸಂಜೆ ೬.೩೦ಕ್ಕೆ ಸ್ವಾಮಿಗಳಿಗೆ ಕಂಕಣ ಧಾರಣೆ, ಮಹಾಮಂಗಳಾರತಿ ಬಳಿಕ ೭ ಗಂಟೆಗೆ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿಗಳಿಗೆ ಸೂರ್ಯ ಮಂಡಲೋತ್ಸವ ನಡೆಯಲಿದೆ. ಏ.೧೩ರ ಬೆಳಗ್ಗೆ ೮ ಗಂಟೆಗೆ ಶ್ರೀ ಮದನಾಧಿ ಅನಘ ನಿರಂಜನ ಜಂಗಮ ಪೂಜೆ, ಸಂಜೆ ೬.೩೦ಕ್ಕೆ ಅಡ್ಡ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಏ.೧೪ರಂದು ಬೆಳಗ್ಗೆ ೫ ಗಂಟೆಗೆ ಶ್ರೀ ಕ್ಷೇತ್ರನಾಥ ವೀರಭದ್ರಸ್ವಾಮಿಯ ಪ್ರೀತ್ಯರ್ಥ ದುಗ್ಗಳ ಹಾಗೂ ಅಗ್ನಿ ಕೊಂಡೋತ್ಸವ ಸೇವೆ, ೬ ಗಂಟೆಗೆ ವಟುಗಳಿಗೆ ಲಿಂಗಧೀಕ್ಷಾ ಕಾರ್ಯಕ್ರಮ, ೭ ಗಂಟೆಗೆ ಸಣ್ಣ ಚಂದ್ರಮಂಡಲೋತ್ಸವ, ೧೧ ಗಂಟೆಗೆ ಮುತ್ತೈದೆ ಸೇವೆ, ಮದ್ಯಾಹ್ನ ೧೨ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಪ್ರಮುಖರಾದ ಎಸ್.ಮಹೇಶ್, ಬಿ.ಬಿ.ಬಸಪ್ಪ, ಬಿ.ಎಸ್.ಪ್ರಕಾಶ್, ಸಿ.ಎಸ್.ರಾಜಶೇಖರ್, ನಾರಾಯಣಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net