

ಲಿಂಗಸುಗೂರು: ಪಟ್ಟಣದ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಗುರುರಾಯರ 352ನೇ ಆರಾಧನಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಮಧ್ಯಾರಾಧನೆ ಕಾರ್ಯಕ್ರಮಗಳು ಸಂಪನ್ನಗೊಂಡವು.
ಪೂರ್ವಾರಾಧನೆ ಪ್ರಯುಕ್ತ ಗುರುವಾರ ಸಾಮೂಹಿಕ ಅಷ್ಟೋತ್ತರ ಪಾರಾಯಣ, ಫಲ ಪಂಚಾಮೃತಾಭಿಷೇಕ, ಸತ್ಯನಾರಾಯಣ ಪೂಜೆ, ಪ್ರವಚನ, ಪ್ರಸಾದ, ಹಸ್ತೋದಕ, ತೀರ್ಥ ಪ್ರಸಾದ ಹಾಗೂ ಸಂಜೆ 7ಕ್ಕೆ ಗಜವಾಹನ ಉತ್ಸವ, ರಥೋತ್ಸವ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮ ನಡೆದವು.
ಇದನ್ನೂ ಓದಿ:
ಮಧ್ಯಾರಾಧನೆ ಪ್ರಯುಕ್ತ ಶುಕ್ರವಾರ ಸಾಮೂಹಿಕ ಅಷ್ಟೋತ್ತರ ಪಾರಾಯಣ, ರಾಯರ ಬೃಂದಾವನಕ್ಕೆ 108 ಲೀ. ಕ್ಷೀರಾಭಿಷೇಕ, ಫಲ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಪ್ರವಚನ, ಹಂಸ ವಾಹನೋತ್ಸವ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.
ಸೆ.2 ರಂದು ಉತ್ತರಾರಾಧನೆ ಪ್ರಯುಕ್ತ ಅಷ್ಟೋತ್ತರ ಪಾರಾಯಣ, ಪಂಚಾಮೃತಾಭಿಷೇಕ, ಮಹಾರಥೋತ್ಸವ, ಅನ್ನಸಂತರ್ಪಣೆ, ತೀರ್ಥ, ಪ್ರಸಾದ, ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿವೆ.