ಗುರುಗಳ ಮೌನ ಕ್ರಾಂತಿ ಸಕಾಲಿಕ

Btw_Tatva
Published on

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರುಗಳು 1908ರಲ್ಲಿ ತಲಶ್ಶೇರಿಯಲ್ಲಿ ಶ್ರೀ ಜಗನ್ನಾಥ ದೇವಾಲಯದ ವಿಚಾರದಲ್ಲಿ ನಡೆಸಿದ ಹೋರಾಟದಂತೆ, ಅಂದು ನಡೆಸಿದ ಮೌನ ಕ್ರಾಂತಿಯ ಹೋರಾಟವು ಪ್ರಸ್ತುತ ಕಾಲಟ್ಟದಲ್ಲಿಯೂ ಸಕಾಲಿಕ ಎಂದು ಪ್ರಶಾಂತ್​ ಎರಮಲೆ ಹೇಳಿದರು.

ಯುವವಾಹಿನಿ ಬಂಟ್ವಾಳ ಟಕದ ವತಿಯಿಂದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಪುತ್ರೋಟಿಬೈಲ್​ನಲ್ಲಿ ನಡೆದ ಗುರುತತ್ವವಾಹಿನಿ 11ನೇ ಮಾಲಿಕೆಯಲ್ಲಿ ಮಾತನಾಡಿದರು.

ಶಿವಾನಂದ ಎಂ, ಯುವವಾಹಿನಿ ಬಂಟ್ವಾಳ ಟಕ ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ, ನಿರ್ದೇಶಕರಾದ ಮಹೇಶ್​ ಬೊಳ್ಳಾಯಿ, ಹರಿಣಾ ನವೀಶ್​ ನಾವುರ, ಕಿರಣ್​ ರಾಜ್​ ಪೂಂಜರೆಕೋಡಿ, ಮಾಜಿ ಅಧ್ಯಕ್ಷ ಪ್ರೇಮನಾಥ್​ ಕರ್ಕೇರ, ರಾಮಚಂದ್ರ ಸುವರ್ಣ, ನಾಗೇಶ್​ ಪೊನ್ನೋಡಿ, ರಾಜೇಶ್​ ಸುವರ್ಣ, ಸದಸ್ಯರಾದ ಸುನೀಲ್​ ಸಾಲ್ಯಾನ್​ ಮದೋರ್ಳಿ, ಜೈದೀಪ್​ ಏಲಬೆ, ನಾಗೇಶ್​ ಪೂಜಾರಿ ಏಲಬೆ, ಚಿನ್ನ ಕಲ್ಲಡ್ಕ, ಜಗನ್ನಾಥ್​ ಕಲ್ಲಡ್ಕ, ಯತೀಶ್​ ಬೊಳ್ಳಾಯಿ, ಯಶೋಧರ್​ ಕಟ್ಟತ್ತಿಲ, ಯತೀಶ್​ ಕರ್ಕೇರ, ಹರೀಶ್​ ಅಜೆಕಲ, ಸೂರಜ್​ ತುಂಬೆ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್​ ಅಮೀನ್​ ಏರಮಲೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net