ಗುರುಗಳ ಮಾರ್ಗದರ್ಶನ ಅಗತ್ಯ

7ATN1
ರಡ್ಡೇರಹಟ್ಟಿ ಗ್ರಾಮದ ಪಿಎಂ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಸಿಜೋಳೆ, ಶಿವಾನಂದ ಮೇಲಗಡೆ, ದಿಲೀಪ ಹಂಜಿ, ಎ.ಟಿ.ಸಲ್ಲಗೋಳ, ಬಿ.ಎಲ್.ಪೂಜಾರಿ ಇತರರಿದ್ದರು.
Published on

ಅಥಣಿ ಗ್ರಾಮೀಣ: ಜೀವನದಲ್ಲಿ ಯಾವುದೇ ಸಾಧನೆ ಮಾಡಿದರೂ ಅದರ ಹಿಂದೆ ಗುರುಗಳ ಮಾರ್ಗದರ್ಶನ ಇರುತ್ತದೆ ಎಂದು ದೈಹಿಕ ಶಿಕ್ಷಕ ಎಸ್.ಎಸ್.ಸಿಜೋಳೆ ಹೇಳಿದರು.

ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಪಿಎಂ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 1999-2000ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಶಿವಾನಂದ ಮೇಲಗಡೆ ಮಾತನಾಡಿದರು. ಹಳೆಯ ವಿದ್ಯಾರ್ಥಿ ಬಾಹುಬಲಿ ದಾದಾಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಿಸಿದ ಎಲ್ಲ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಂತರ ಮನರಂಜನೆ ಕಾರ್ಯಕ್ರಮ ಜರುಗಿದವು. ಶಿಕ್ಷಕರಾದ ದಿಲೀಪ ಹಂಜಿ, ಎ.ಟಿ.ಸಲ್ಲಗೋಳ, ಬಿ.ಎಲ್. ಪೂಜಾರಿ, ಅರುಣಕುಮಾರ ರಾಜಮಾನೆ, ವಿ.ಪಿ.ಎಡವಿ, ಹಳೆಯ ವಿದ್ಯಾರ್ಥಿಗಳಾದ ಮಂಜುನಾಥ ಹುಲಸದಾರ,ಭೀರಪ್ಪ ಲೋಕುರ, ಶಂಕರೆವ್ವ ಕಿತ್ತೂರ, ಪುಷ್ಪಾ ತೀರ್ಥ, ಕಮಲಾ ಖೋತ ಇತರರಿದ್ದರು. ರಾಜು ಹುಲಗಬಾಳಿ ಸ್ವಾಗತಿಸಿದರು. ಮುರಿಗೆಪ್ಪ ನಾಯಕ ನಿರೂಪಿಸಿದರು. ದತ್ತಾತ್ರೆಯ ಭೋಸಲೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net