ಗುರಿ ಮುಟ್ಟಲು ಗುರು ಮಾರ್ಗದರ್ಶನ ಅಗತ್ಯ

ratnapala
Published on

ಹುಬ್ಬಳ್ಳಿ: ಇಲ್ಲಿಯ ರತ್ನಪಾಲ ಎ. ಶೆಟ್ಟಿ ಪದವಿಪೂರ್ವ ಕಾಲೇಜ್‌ನಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಶನಿವಾರ ಏರ್ಪಾಟಾಗಿತ್ತು.
ಶ್ರೀ ಮಹಾವೀರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಎಸ್.ಕೆ. ಆದಪ್ಪನವರ ಮಾತನಾಡಿ, ವಿದ್ಯಾರ್ಥಿಗಳು ಗುರಿ ಇಟ್ಟುಕೊಳ್ಳಬೇಕು. ಗುರುವಿನ ಮಾರ್ಗದರ್ಶನ ಪಡೆಯಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಸಿಹಿ ಹಂಚಿ ಸ್ವಾಗತಿಸಲಾಯಿತು.
ಶಾ ಡಿ ಜೆ ಛೇಡಾ ಐಟಿಐ ಪ್ರಾಚಾರ್ಯ ಆರ್.ಬಿ. ಸಾಬಣ್ಣವರ, ಲೋಹಿತ ಸರ್ಜನ್, ಉಪ ಪ್ರಾಚಾರ್ಯೆ ಸುಜಾತಾ ನಲವಡಿ, ಪ್ರಾಧ್ಯಾಪಕರಾದ ಹೇಮಾವತಿ ವಿ., ಅನಿತಾ ಕೋಣೆರಿ, ಜಯಶ್ರೀ ಮುಗಳಿ, ಭಾಗ್ಯಶ್ರೀ, ಲಕ್ಷ್ಮೀ ಗುರವ, ಪದ್ಮಾ ದಯಣ್ನವರ, ಹರ್ಷ ಆದಪ್ಪನವರ, ಅಭಿಷೇಕ ಹಂಡಗೆ, ವಿಶ್ವವಿನಾಯಕ, ಸೋಮಶೇಖರ್ ಅಣ್ಣಿಗೇರಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net