ಸಾಮಾಜಿಕ ಕಾರ್ಯಕ್ಕೆ ಗುರುವಿನ ಮಾರ್ಗದರ್ಶನ ಅವಶ್ಯ

Guru's guidance is essential for social work
ಕೆರೂರ ಪಟ್ಟಣದ ಬನಶಂಕರಿದೇವಿ ಜಾತ್ರೆಯ ಕಳಸಾವರೋಹಣ ನಿಮಿತ್ತ ದೇವಸ್ಥಾನ ಹಾಗೂ ರುದ್ರಮುನಿ ಶ್ರೀಗಳ ದೇವಾಂಗಮಠಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಡಾ.ಎಮ್.ಜಿ. ಕಿತ್ತಲಿ, ವಿಠ್ಠಲಗೌಡ ಗೌಡರ, ಸದಾನಂದ ಮದಿ ಮತ್ತಿತರರಿದ್ದಾರೆ.
Published on

ಕೆರೂರ : ಸಮಾಜಮುಖಿ ಕಾರ್ಯದಲ್ಲಿ ಮುನ್ನಡೆಯಬೇಕಾದರೆ ಗುರುವಿನ ಹಾಗೂ ಹಿರಿಯರ ಮಾರ್ಗದರ್ಶನ ಬಹುಮುಖ್ಯವಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಪಟ್ಟಣದ ಬನಶಂಕರಿದೇವಿ ಜಾತ್ರೆಯ ಕಳಸಾವರೋಹಣ ನಿಮಿತ್ತ ದೇವಸ್ಥಾನ ಹಾಗೂ ರುದ್ರಮುನಿ ಶ್ರೀಗಳ ದೇವಾಂಗಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಮಾತನಾಡಿದ ಅವರು, ಒಂದು ಕಲ್ಲು ಶಿಲೆಯಾಗಲು ಶಿಲ್ಪಿಗಳ ಶ್ರಮವಿರುತ್ತದೆ. ಸಮಾಜವು ಧಾರ್ಮಿಕವಾಗಿ ಅಭಿವೃದ್ಧಿ ಹೊಂದಲು ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು.ದೇವಸ್ಥಾನದ ಮಂಗಲ ಭವನ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ಧನ ಸಹಾಯ ನೀಡುವುದಾಗಿ ಭರವಸೆ ನೀಡಿದರು.

ಕಳಸಾಅವರೋಹಣ ಅಂಗವಾಗಿ ಕರುನಾಡು ಕಲಾ ನವತರುಣ ನಾಟ್ಯ ಸಂಘ ಹಮ್ಮಿಕೊಂಡಿದ್ದ ಕಿವುಡ ಮಾಡಿದ ಕಿತಾಪತಿ ನಾಟಕಕ್ಕೆ ಗೋ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.

ಜಿಪಂ ಮಾಜಿಸದಸ್ಯ ಡಾ.ಎಮ್.ಜಿ. ಕಿತ್ತಲಿ, ಪಪಂ ಸದಸ್ಯ ವಿಠ್ಠಲಗೌಡ ಗೌಡರ, ಸದಾನಂದ ಮದಿ, ಮಯೂರ ಚೂರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net