

ಮುಂಡಗೋಡ: ಪ್ರತಿಯೊಂದು ಶಿಕ್ಷಣ ಕ್ಷೇತ್ರದಲ್ಲಿ ಗುರುವಿನ ಮಾರ್ಗದರ್ಶನ ಅವಶ್ಯ ಎಂದು ಜಿಪಂ ಮಾಜಿ ಸದಸ್ಯ ಎಲ್.ಟಿ.ಪಾಟೀಲ ಹೇಳಿದರು.
ಪಟ್ಟಣದ ಲೊಯೋಲ ವಿಕಾಸ ಕೇಂದ್ರದ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಪ್ರತಿಯೊಂದು ಮಗುವನ್ನು ಶಿಕ್ಷಣವಂತರನ್ನಾಗಿ ಸಮಾಜಕ್ಕೆ ಕೊಡುಗೆ ನೀಡುವ ಶಿಕ್ಷಕರಿಗೆ ಅಪಾರವಾದ ಗೌರವವಿದೆ. ಶಿಕ್ಷಕ ವೃತ್ತಿ ಶ್ರೇಷ್ಠವಾದುದು. ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕು ಎಂದರು.
ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕೆ.ಎಸ್. ಹೊಸಮನಿ ಉಪನ್ಯಾಸ ನೀಡಿದರು. ತಹಸೀಲ್ದಾರ್ ಶಂಕರ ಗೌಡಿ, ಬಿಇಒ ಜಕಣಾಚಾರಿ, ರಮೇಶ ಅಂಬಿಗೇರ, ದಯಾನಂದ ನಾಯ್ಕ, ಜಿ.ಎನ್. ನಾಯ್ಕ, ವಸಂತ ಕೊಣಸಾಲಿ, ಸೋಮಣ್ಣ ಮುಡೆನ್ನವರ, ವಿನಾಯಕ ಶೇಟ, ಫಕೀರಸ್ವಾಮಿ ವರದಿ, ವಿಜಯಕುಮಾರ ಶೆಟ್ಟಿ, ವಿ.ವಿ. ಮಲ್ಲನಗೌಡರ ಇತರರಿದ್ದರು.