

ಬೋರಗಾಂವ: ಗುರುಗಳ ಮಾರ್ಗದರ್ಶನದಿಂದ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ. ಪ್ರತಿಯೊಬ್ಬರೂ ಸಾಮಾಜಿಕ ಪ್ರಜ್ಞೆ ಹೊಂದಬೇಕು ಎಂದು ನಿವೃತ ಮುಖ್ಯಶಿಕ್ಷಕ ಟಿ.ಡಿ.ಸಾವಡೆ ಅಭಿಪ್ರಾಯಪಟ್ಟರು.
ಗ್ರಾಮದ ಕೆ.ಎಸ್.ಪಾಟೀಲ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 1991-92ನೇ ಸಾಲಿನಲ್ಲಿ ಕಲಿತ10ನೇ ತರಗತಿ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ಯಶಸ್ಸು ಸಿಗಲು ಶಿಕ್ಷಕರ ಕೊಡುಗೆ ಅಪಾರ. ಸಮಾಜದ ಋಣ ತೀರಿಸಲು ನಾವೆಲ್ಲರೂ ಪ್ರಯತ್ನಿಸಬೇಕು. ಶಾಲೆ ಹಾಗೂ ಶಿಕ್ಷಕರನ್ನು ಮರೆಯದಿರಿ ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ಆರ್.ಎಸ್. ಪಚಂಡಿ ಮಾತನಾಡಿ, ನಮ್ಮ ಸಾಧನೆ ಇತರರಿಗೆ ಪ್ರೇರಣೆಯಾಗಬೇಕು ಎಂದರು.
ನಿವೃತ್ತ ಮುಖ್ಯಶಿಕ್ಷಕ ಮಹಾದೇವ ಉಲಪೆ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದು ತಿಳಿಸಿದರು. ಹಳೇ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.
ಆರ್.ಎ.ಇಂಗಳೆ, ರಾವಸಾಹೇಬ ಪಚಂಡಿ, ಖಾನು ಐದಮಾಳೆ,ಡಿ.ಬಿ. ಕಾಂಬಳೆ, ವಸಂತ ಪೂಜಾರ, ಎಸ್.ಕೆ.ಶಿಂಗೆ, ವಿ.ಎಲ್.ಕಾಂಬಳೆ, ಮನೋಜ ಮಾಲಗಾವೆ ಇತರರಿದ್ದರು.