ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ

13 vikram 1
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಗತ್ತಿನಲ್ಲಿ ತಂದೆ, ತಾಯಿ, ಭೂಮಿ, ಗೋಮಾತೆ ಋಣದಂತೆ ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಅಮ್ಮಿನಬಾವಿಯ ಶ್ರೀ ಶಾಂತೇಶ್ವರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 2000-2001ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ನಮಗೆ ಜೀವನದ ಬಗ್ಗೆ ಮಾರ್ಗದರ್ಶನ ಮಾಡಿ ಉತ್ತಮ ಪ್ರಜೆಗಳಾಗಿ ರೂಪಿಸುವವನೇ ಗುರು. ಅಂತಹ ಗುರುಗಳನ್ನು ನಾವು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಗುರುವಿನ ಸ್ಥಾನಕ್ಕೆ ಕುತ್ತು ಬಂದಿದೆ. ಮೊದಲು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಂಡಿಸಿದರೆ ಪೋಷಕರು ಪ್ರಶ್ನಿಸುತ್ತಿರಲಿಲ್ಲ. ಬದಲಾದ ವಾತಾವರಣದಲ್ಲಿ ಗುರುಗಳ ಬಗ್ಗೆ ಭಯ, ಗೌರವಗಳು ಕಡಿಮೆಯಾಗಿದ್ದು, ಶೈಕ್ಷಣಿಕ ಗುಣಮಟ್ಟವೂ ಕುಸಿದಿದೆ. ಇದಕ್ಕೆ ಹಲವಾರು ಕಾರಣಗಳಿವೆ ಎಂದರು.
ಎನ್​.ಬಿ.ಪವಾರ, ವಿ.ಬಿ. ಕೆಂಚನಗೌಡ್ರ, ಆರ್​.ಎಸ್​. ಗುಲಗಂಜಿಕೊಪ್ಪ, ಪುಷ್ಪಾ ಬಾಗಲವಾಡಿ, ಚನ್ನವ್ವ ನೀರಲಕಟ್ಟಿ, ಸುಮನ್​ ಬೋಂಗಾಳೆ, ಡಿ.ಎಸ್​. ಪೂಜಾರ, ರಾಜು ಕಾಳಗಿ, ನಾಗರಾಜ ಅಮರಗೋಳ, ಎಂ. ವಿ. ಅಂಗಡಿ ಮಾತನಾಡಿದರು.
ಹಳೇ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿಯ ಎಂ.ಸಿ. ಹುಲ್ಲೂರ, ಮಾಳಪ್ಪ ಅಮರಶೆಟ್ಟಿ, ಸುನೀಲ ಗುಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net