

ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ದ ಶ್ರೀ ಸೋಮೇಶ್ವರ ದೇವಸ್ಥಾನದ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷರನ್ನಾಗಿ ಗುರುರಾಜ ಪಾಟೀಲಕುಲಕರ್ಣಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶನಿವಾರ ದೇವಸ್ಥಾನದಲ್ಲಿ ಕರೆಯಲಾದ ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು. ನಿಕಟಪೂರ್ವ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಅವರು ಅಧಿಕಾರ ಹಸ್ತಾಂತರ ಮಾಡಿದರು.
ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ ಮತ್ತು ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಡಾ. ಸುಧಾಮೂರ್ತಿಯವರು ಈ ದೇವಸ್ಥಾನಕ್ಕೆ ಕಾಯಕಲ್ಪ ನೀಡಿದ ಮೇಲೆ ಭಕ್ತರ ಸಂಖ್ಯೆ ಅಧಿಕವಾಗಿದೆ. ಪ್ರತಿ ವರ್ಷ ಇನ್ಫೋಸಿಸ್ ಪ್ರತಿಷ್ಠಾನದಿಂದ ಪುಲಿಗೆರೆ ಉತ್ಸವ, ಕಮಿಟಿಯಿಂದ ಶಿವರಾತ್ರಿ ಉತ್ಸವ, ಜಾತ್ರೆ ಮತ್ತು ವರ್ಷದುದ್ದಕ್ಕೂ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಮೂಲ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡಲಾಗುತ್ತಿದೆ. ದೇವಸ್ಥಾನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡೋಣ ಎಂದರು.
ಅರ್ಚಕರ ಸಂಘದ ಅಧ್ಯಕ್ಷ ವಿ.ಎಲ್.ಪೂಜಾರ, ಚನ್ನಪ್ಪ ಜಗಲಿ, ಸಿದ್ದನಗೌಡ ಬಳ್ಳೊಳ್ಳಿ, ಪ್ರವೀಣ ಬಾಳಿಕಾಯಿ, ಪೂರ್ಣಾಜಿ ಕರಾಟೆ, ಬಸವರಾಜ ಬಾಳೇಶ್ವರಮಠ, ಎನ್.ಆರ್. ಸಾತಪೂತೆ, ಮಾಲಾದೇವಿ ದಂದರಗಿ, ಕಾಶಪ್ಪ ಮುಳಗುಂದ, ಸುಮಾ ಚೋಟಗಲ್, ಬಸವರಾಜ ಪುಠಾಣಿ, ನಿಂಗಪ್ಪ ತಹಸೀಲ್ದಾರ, ಸೋಮಶೇಖರ ಕೆರಿಮನಿ, ಬಸವರಾಜ ಮೆಣಸಿನಕಾಯಿ, ವಿರುಪಾಕ್ಷ ಆದಿ, ನಾಗರಾಜ ಕಳಸಾಪೂರ, ಸೋಮಣ್ಣ ಮುಳಗುಂದ, ಸೋಮನಾಥ ಪೂಜಾರ ಇತರರಿದ್ದರು.