

ಧಾರವಾಡ: ಭಗವಾನ್ ವೇದವ್ಯಾಸರು ಜನಿಸಿದ ದಿನ ಗುರುವಿಗೆ ಗೌರವಪೂರ್ವಕ ನಮನ ಸಮರ್ಪಿಸುವ ಶುಭದಿನ. ಭಗವಾನ್ ಬುದ್ಧನಿಗೆ ಜ್ಞಾನ ಪ್ರಾಪ್ತಿಯಾದ ದಿನ ಕೂಡ ಇದಾಗಿದೆ. ಮಹನಿಯರನ್ನು ಸ್ಮರಿಸಿ ಅವರ ಆದರ್ಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಕರ್ನಾಕ ಮಹಾವಿದ್ಯಾಲಯದ ತತ್ವಶಾಸ ವಿಭಾಗದ ಮುಖ್ಯಸ್ಥ ಡಾ. ಆನಂದ ಸ್ವಾಮೀಜಿ ಎಂದರು.
ನಗರದ ಎಂ.ಎನ್. ಪಾಟೀಲ ಎಜುಕೇಶನ್ ೌಂಡೇಶನ್ ಅಡಿ ಸ್ವಾಮಿ ವಿವೇಕಾನಂದ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶಿವಶಂಕರರಾವ್ ಮಾತನಾಡಿ, ಗುರುವಿನ ಆಜ್ಞೆಯನ್ನು ಪಾಲಿಸಿದಾಗ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದರು.
ಇದೇವೇಳೆ ಸಂಕಲ್ಪ ನೀಟ್ ಅಕಾಡೆಮಿ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ರೂಪುರೇಷೆಗಳ ಮಾಹಿತಿ ನೀಡಿದರು.
ಉಪ ಪ್ರಾಚಾರ್ಯೆ ನೇತ್ರಾವತಿ ಗಾಳಿಮಠ ಹಾಗೂ ಆಡಳಿತಾತ್ಮಕ ಪ್ರಾಚಾರ್ಯ ಕಾರ್ತಿಕ್ ಪಾಟೀಲ, ನೀಟ್ ಸಂಯೋಜಕ ಡಾ. ಬಾಲಚಂದ್ರ ಕಾಮತ್ ವೇದಿಕೆಯಲ್ಲಿದ್ದರು.