ದ್ಯಾಮಮ್ಮದೇವಿ ದೇವಸ್ಥಾನದಲ್ಲಿ ಗುರುಪೂರ್ಣಿಮೆ

06 SHIROLA
ಶಿರೋಳದ ಶ್ರೀ ದ್ಯಾಮಮ್ಮದೇವಿ ದೇವಸ್ಥಾನದಲ್ಲಿ ಗುರುಪೂರ್ಣಿಮೆ ನಿಮಿತ್ತ ಗ್ರಾಮದ ಭಕ್ತರು ಮುರುನಾಳ ಮಳೇರಾಜೇಂದ್ರ ಸ್ವಾಮಿಮಠದ ಗುರುನಾಥ ಸ್ವಾಮೀಜಿ ಅವರನ್ನು ಸನ್ಮಾನಿಸಿದರು.
Published on

ಶಿರೋಳ: ಸಮಾಜದ ಉದ್ಧಾರಕ್ಕಾಗಿ ಹಿಂದೆ ಮಹಾನ್ ವ್ಯಕ್ತಿಗಳು ಲೋಕಕಲ್ಯಾಣಕ್ಕಾಗಿ ಹಗಲಿರುಳು ತಪಸ್ಸು ಮಾಡಿ ಫಲ ಪಡೆದಿದ್ದಾರೆ. ಯುವಜನಾಂಗವೂ ಅಂಥ ಶಕ್ತಿಯನ್ನು ಮೈಗೂಡಿಸಿಕೊಂಡರೆ ಭೂಮಿ ಮೇಲೆ ಜನಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಮುರುನಾಳ ಮಳೇರಾಜೇಂದ್ರ ಸ್ವಾಮಿಮಠದ ಗುರುನಾಥ ಸ್ವಾಮೀಜಿ ಹೇಳಿದರು. ಗ್ರಾಮದ ಶ್ರೀ ದ್ಯಾಮಮ್ಮ ದೇವಿ ದೇವಸ್ಥಾನದಲ್ಲಿ ಗುರುಪೂರ್ಣಿಮೆ ನಿಮಿತ್ತ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥನೆ ಮಾಡಿದ ನಂತರ ಅವರು ಮಾತನಾಡಿದರು. ಭಕ್ತರು ದೇವಿಗೆ ಅಭಿಷೇಕ, ನವಗ್ರಹ ಹೋಮ ನೆರವೇರಿಸಿದರು. ಆಧ್ಯಾತ್ಮಿಕ ಚಿಂತಕ ಬಾಪುಗೌಡ್ರ ತಿಮ್ಮನಗೌಡ್ರ, ನಿವೃತ್ತ ಶಿಕ್ಷಕ ಎಚ್.ವೈ. ಯಂಡಿಗೇರಿ, ತಾಪಂ ಮಾಜಿ ಸದಸ್ಯ ಪ್ರಕಾಶಗೌಡ ತಿರಕನಗೌಡ್ರ, ಸಂಗಪ್ಪ ಕಂಬಳಿ, ಶರಣಪ್ಪಗೌಡ ತಿರಕನಗೌಡ್ರ, ಶಂಕ್ರಪ್ಪ ಮುಚಗಂಡಿ, ಮಾಲಿಂಗಯ್ಯ ದೊಡಮನಿ, ಹನುಮಂತಗೌಡ ತಿರಕನಗೌಡ್ರ, ಮತ್ತಣ್ಣ ಪತ್ತಾರ, ಶಂಕರಗೌಡ ಪಾಟೀಲ, ಮಲ್ಲನಗೌಡ ತಿರಕನಗೌಡ್ರ, ಸದಾಶೀವ ಮೆಣಸಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net