ಗುರುಪುರ ಬಂಡಿ ಜಾತ್ರೆ ಪೂರ್ವಭಾವಿ ಸಭೆ

Gur_Bandi Jatre
Published on

ಗುರುಪುರ: ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನದಲ್ಲಿ ಫೆ.13ರಿಂದ 15ರ ವರೆಗೆ ನಡೆಯಲಿರುವ ‘ಬಂಡಿ’ ಜಾತ್ರೆ ಪ್ರಯುಕ್ತ ಪ್ರಧಾನ ಗಡಿಕಾರ ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ ನೇತೃತ್ವದಲ್ಲಿ ಭಾನುವಾರ ದೈವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಅನ್ನದಾನ ವ್ಯವಸ್ಥೆ, ಸಂತೆ-ವ್ಯಾಪಾರ, ಧಾರ್ಮಿಕ ವಿಧಿವಿಧಾನಗಳ ಕುರಿತು ಸಭಿಕರು ಸಲಹೆೆ ನೀಡಿದರು. ಗುತ್ತುಗಳ ಯಜಮಾನರು, ದೈವಸ್ಥಾನದ ತಂತ್ರಿ ಜಿ.ಟಿ.ವಾಸುದೇವ ಭಟ್, ದೈವದ ಪಾತ್ರಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು, ಸದಸ್ಯರು, ಊರಿನ ನಾಗರಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net