ಬಿಜೆಪಿಯಿಂದ ಗುರು ಪೂರ್ಣಿಮೆ ಆಚರಣೆ

gurupoornime
Published on

ಮಡಿಕೇರಿ:

ಗುರು ಪೂರ್ಣಿಮ ದಿನದ ಅಂಗವಾಗಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಡಿಕೇರಿ ನಗರದ ಯೋಗ ಶಿಕ್ಷಕ ಕೆ.ಕೆ. ಮಹೇಶ್ ಅವರನ್ನು ಜಿಲ್ಲಾ ಬಿಜೆಪಿ ಪ್ರಮುಖರು ಹಾಗೂ ಯೋಗ ಪಟುಗಳು ಸೇರಿ ನಗರದ ಭಾರತೀಯ ವಿದ್ಯಾ ಭವನದಲ್ಲಿ ಸನ್ಮಾನಿಸಿದರು.

ನಿವೃತ್ತ ಪ್ರಾಂಶುಪಾಲ ಟಿ. ಸಿ. ಮಾದಪ್ಪ, ಜಾನಪದ ಕಲಾವಿದೆ ಬೈತಾಡ್ಕ ಜಾನಕಿ ಬೆಳ್ಯಪ್ಪ, ನಿವೃತ್ತ ಶಿಕ್ಷಕ ರಾಧಗೋಪಾಲ ಕೃಷ್ಣ ಹೆಬ್ಬಾರ್ ಹಾಗೂ ಸಂಗೀತ ಶಿಕ್ಷಕಿ ಯಾಗಿ ನೂರಾರು ಮಕ್ಕಳಿಗೆ ತರಬೇತಿ ನೀಡುತಿರುವ ಸರೋಜ ಸುಧಾಕರ್ ಅವರುಗಳನ್ನು ಅವರ ಮನೆಗಳಿಗೆ ತೆರಳಿ ಸನ್ಮಾನಿಸಿ ಗೌರವಿಸ ಲಾಯಿತು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ನಗರಸಭಾ ಅಧ್ಯಕ್ಷೆ ಕಲಾವತಿ, ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಜಿಲ್ಲಾ ವಕ್ತಾರ ಬಿ.ಕೆ. ಅರುಣ್ ಕುಮಾರ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಕವನ್ ಕಾವೇರಪ್ಪ, ನಗರ ಸಭಾ ಸದಸ್ಯರುಗಳಾದ ಸವಿತ ರಾಕೇಶ್, ಸಬೀತಾ, ಯುವ ಮೋರ್ಚಾದ ಪೂಣಚ್ಚ, ಒಬಿಸಿ ಮೋರ್ಚಾದ ಅಧ್ಯಕ್ಷ ಗಜೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net