

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದಲ್ಲಿ ಆಧ್ಯಾತ್ಮಿಕ ಅಥವಾ ಶೈಕ್ಷಣಿಕ ಗುರುಗಳ ಗೌರವಾರ್ಥವಾಗಿ ಅವರಿಗೆ ನಮನ ಸಲ್ಲಿಸಲು ಮತ್ತು ಅವರಿಗೆ ಗೌರವ ಅಪಿರ್ಸಲು ಗುರು ರ್ಪೂಣಿಮೆ ಆಚರಿಸಲಾಗುತ್ತದೆ. ಮನುಷ್ಯನ ಬದುಕು ಕಟ್ಟುವಲ್ಲಿ ಗುರುಗಳ ಪಾತ್ರ ಪ್ರಮುಖವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಬೌದ್ಧಿಕ ಪ್ರಮುಖ ರಾಜು ಹೈಬತ್ತಿ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ಗುರು ಪೂಜಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಗುರು ರ್ಪೂಣಿಮೆಗೆ ವಿಶೇಷ ಮಹತ್ವವಿದೆ. ಗುರುವಿಲ್ಲದಿದ್ದರೆ ಮಾನವನಿಗೆ ಸತ್ಯ ಮತ್ತು ಅಸತ್ಯದ ನಡುವಿನ ವ್ಯತ್ಯಾಸ ತಿಳಿಯಲು ಸಾಧ್ಯವಿಲ್ಲ. ಹೀಗಾಗಿ ಗುರುವಿಗೆ ನಮನ ಸಲ್ಲಿಸಲು ಗುರು ರ್ಪೂಣಿಮೆ ಆಚರಿಸುತ್ತೇವೆ ಎಂದರು.
ಶಾಲೆ ಪ್ರಾಚಾರ್ಯೆ ಅನಿತಾ ರೈ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಇತರರು ಇದ್ದರು. ವೀರರಾಜ ಕೆ. ನಿರೂಪಿಸಿದರು.