ಗುರು-ಶಿಷ್ಯ ಪರಂಪರೆ ಜಗತ್ತಿಗೆ ಮಾದರಿ

1 A
Published on

ಚನ್ನರಾಯಪಟ್ಟಣ : ಭಾರತದ ಗುರು-ಶಿಷ್ಯ ಪರಂಪರೆ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕೆ. ನಾಗೇಶ್ ಹೇಳಿದರು.
ಪಟ್ಟಣದ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಜ್ಞಾನ ಸಾಗರ ಅಂತಾರಾಷ್ಟ್ರೀಯ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಗುರುದೀಕ್ಷಾ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾಸಂಸ್ಥೆಯ ಸಿಇಒ ಡಾ. ಭಾರತಿನಾಗೇಶ್ ಮಾತನಾಡಿ, ಶಕ್ತಿಯೇ ಜೀವನ, ದುರ್ಬಲವೇ ಮರಣ ಎಂಬ ವಿವೇಕಾನಂದರ ವಾಣಿ ನಮಗೆ ಸದಾ ಆತ್ಮವಿಶ್ವಾಸ ತುಂಬುತ್ತದೆ ಎಂದರು. ಡಾ. ಸುಜಾ ಫಿಲಿಪ್ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಲು ಅಗತ್ಯ ಸೌಲಭ್ಯ ನೀಡುವುದರೊಂದಿಗೆ ಪ್ರತೀ ಮಗುವಿನ ಕಲಿಕೆ ಉತ್ತಮಪಡಿಸಲು ಈ ಶಾಲೆ ಶ್ರಮಿಸುತ್ತಿದೆ ಎಂದರು. ಇದಕ್ಕೂ ಮೊದಲು ವಿದ್ಯಾರ್ಥಿಗಳು ತಮ್ಮ ಪಾಲಕರ ಪಾದ ಪೂಜೆ ಮಾಡಿದರು ನಂತರ ವಿದ್ಯಾರ್ಥಿಗಳಿಗೆ ಶಿಕ್ಷಕಿಯರು ಆರತಿ ಎತ್ತಿದರು. ಪಾಲಕರು ಮಕ್ಕಳಿಗೆ ಹರಸಿದ್ದು ವಿಶೇಷವಾಗಿ ಗಮನ ಸೆಳೆಯಿತು. ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಫಿಲಿಪ್, ನಿರ್ದೇಶಕರಾದ ನಾರಾಯಣ, ಲಕ್ಷೇಗೌಡ, ರಾಜಣ್ಣ ಮತ್ತು ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net