ಚಂದ್ಲಾಪುರ ಗ್ರಾಮದಲ್ಲಿ ಗುರುಪರವು ಸೇವೆ

ಚಂದ್ಲಾಪುರ ಗ್ರಾಮದೇವತೆ ಪಾರ್ವತಮ್ಮನವರ ಮೂಲ ವಿಗ್ರಹವನ್ನು ಅಲಂಕರಿಸಿರುವುದು.
ಚಂದ್ಲಾಪುರ ಗ್ರಾಮದೇವತೆ ಪಾರ್ವತಮ್ಮನವರ ಮೂಲ ವಿಗ್ರಹವನ್ನು ಅಲಂಕರಿಸಿರುವುದು.
Published on

ಅರಸೀಕೆರೆ: ಶ್ರೀ ಪಾರ್ವತಮ್ಮ ದೇವಿ ಉತ್ಸವ ಅಂಗವಾಗಿ ತಾಲೂಕಿನ ಚಂದ್ಲಾಪುರ ಗ್ರಾಮದಲ್ಲಿ  ಗುರುಪರವು ಸೇವೆ ನಡೆಯಿತು.

ಸರ್ವಾಲಂಕೃತ ಕಳಸ ಹಾಗೂ ದೇವಿಯನ್ನು ಗ್ರಾಮದ ಹಲವು ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು.

ಗ್ರಾಮದ ಮಧ್ಯದಲ್ಲಿರುವ ದೇಗುಲದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದ್ದ ಪಾರ್ವತಮ್ಮ ದೇವಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಿ ಸಂಪ್ರದಾಯದಂತೆ ಪೂಜೆ, ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗಿಸಲಾಯಿತು.

ಆದಿಹಳ್ಳಿ, ಪನ್ನಸಮುದ್ರ ಸೂಳೆಕೆರೆ, ದುಮ್ಮೇನಹಳ್ಳಿ, ಅಗ್ಗುಂದ, ಸಿದ್ದರಹಳ್ಳಿ,ಆನೆನಹಳ್ಳಿ, ಬೊಮ್ಮೇನಹಳ್ಳಿ ಕಾರೆಹಳ್ಳಿ, ಹರಳಕಟ್ಟ, ಬಂಡೀಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಗ್ರಾಮಸ್ಥರ ವತಿಯಿಂದ ಗುರುಪರವು ಸೇವೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net