ಪೂನಾ-ಬೆಂಗಳೂರು ಹೆದ್ದಾರಿಯಲ್ಲಿ ಗುರುನಂಜೇಶ್ವರ ಮಹಾದ್ವಾರ ನಿರ್ವಿುಸಲಿ

20-HNL-1- MANAVI
Published on

ಹಾನಗಲ್ಲ: ತಾಲೂಕಿನ ಕೂಡಲದ ಗುರುನಂಜೇಶ್ವರ ಮಠಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಬಿ ರಸ್ತೆಯ ತೆವರಮೆಳ್ಳಿಹಳ್ಳಿ ಕ್ರಾಸ್​ನಲ್ಲಿ ಮಹಾದ್ವಾರ ನಿರ್ವಿುಸುವಂತೆ ಶಿಗ್ಗಾಂವಿ ಶಾಸಕ ಯಾಶಿರಅಹಮ್ಮದ್​ಖಾನ್ ಪಠಾಣ ಅವರಿಗೆ ಶ್ರೀಮಠದ ಭಕ್ತರು ಮನವಿ ಸಲ್ಲಿಸಿದರು.

ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ, ಹಾವೇರಿ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಮಠಗಳಲ್ಲಿ ಕೂಡಲ ಗುರುನಂಜೇಶ್ವರ ಮಠವೂ ಒಂದಾಗಿದೆ. ಪ್ರತಿ ವರ್ಷ ಮಕರ ಸಂಕ್ರಮಣದಂದು ಧರ್ವ ಹಾಗೂ ವರದಾ ನದಿಗಳ ಸಂಗಮದಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದು ಶ್ರೀಗಳ ಆಶೀರ್ವಾದ ಪಡೆಯುವುದಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೂರದೂರಿನಿಂದ ಆಗಮಿಸುವ ಭಕ್ತರಿಗೆ ಪುಣಾ-ಬೆಂಗಳೂರು ಹೆದ್ದಾರಿಯಿಂದ ಶ್ರೀಮಠಕ್ಕೆ ಆಗಮಿಸಲು ಮಾರ್ಗಸೂಚಿಯ ಸಮಸ್ಯೆಯಾಗುತ್ತಿದೆ. ಆದ್ದರಿಂದ ಪುಣಾ- ಬೆಂಗಳೂರು ರಸ್ತೆಯ ತೆವರಮೆಳ್ಳಿಹಳ್ಳಿ ಕ್ರಾಸ್​ನಲ್ಲಿ ಗುರುನಂಜೇಶ್ವರ ಮಹಾದ್ವಾರ ನಿರ್ವಿುಸಬೇಕಾದ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಭಕ್ತರಾದ ರಾಜಶೇಖರ ಹಲಸೂರ, ಪಂಚಾಕ್ಷರಯ್ಯ ನಡುವಿನಮಠ, ಅಶೋಕಗೌಡ ಪಾಟೀಲ, ಶೇಖಪ್ಪ ದೇಸಾಯಿ, ಪ್ರಕಾಶಗೌಡ ಪಾಟೀಲ, ಗುಂಡಪ್ಪ ತಳವಾರ, ಮಾಲಿಂಗಪ್ಪ ದೇಸಾಯಿ, ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ ಕ್ಷತ್ರೀಯ, ಜಾಫರಸಾಹೇಬ್ ನದಾಫ್, ಅನಿಲ ಜಾಧವ, ಶೇಖರಗೌಡ ಪಾಟೀಲ, ನಿಂಗಪ್ಪ ಹಡಪದ, ನಿಂಗಪ್ಪ ತಳವಾರ, ಫಕ್ರುದ್ದೀನ್ ನದಾಫ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net