

ಕಾಳಗಿ: ಭರತನೂರು ಗ್ರಾಮದಲ್ಲಿ ಅಪಾರ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿAದ ಶ್ರೀ ಗುರುನಂಜೇಶ್ವರ ಮಹಾಶಿವಯೋಗಿಗಳ ರಥೋತ್ಸವ ಗುರುವಾರ ಸಂಜೆ ಜರುಗಿತು.
ಬೆಳಗ್ಗೆ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಗುರುಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ನಡೆಯಿತು. ಬಳಿಕ ರಟಕಲ್‌ನ ಶ್ರೀ ಸಿದ್ಧರಾಮ ಸ್ವಾಮಿಗಳ ಸಮ್ಮುಖದಲ್ಲಿ ಡೊಳ್ಳು, ಬಾಜಾ-ಭಜಂತ್ರಿಯೊAದಿಗೆ ಅಪಾರ ಮುತ್ತೆÊದೆಯರು ರಾಚಪ್ಪಗೌಡರ ಹೊಲಕ್ಕೆ ತೆರಳಿ ಶಿವಬಸಮ್ಮ ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ಶ್ರೀಮಠಕ್ಕೆ ಮೆರವಣಿಗೆ ಆಗಮಿಸಿತು. ಸಂಜೆ ಕುಂಭ ಹಾಗೂ ಲಕ್ಷö್ಮಣರಾವ ಕುಲಕರ್ಣಿ ಅವರ ಮನೆಯಿಂದ ಕಳಸ, ಮಿಣಿ, ನಂದಿಕೋಲುಗಳ ಮೇರವಣಿಗೆ ಮೂಲಕ ಶ್ರೀಮಠಕ್ಕೆ ಆಗಮಿಸಿದವು.
ಸಂಜೆ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮಿಗಳು ರಥಕ್ಕೆ ಪೂಜೆ ಸಲ್ಲಿಸಿ, ಗುರುಗಳ ರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಭಕ್ತರು ಜೈಘೋಷಗಳಿಂದಿಗೆ ತೇರನೆಳೆದು ಭಕ್ತಿ ಅರ್ಪಿಸಿದರು. ಸಾರ್ವಜನಿಕರು ರಥಕ್ಕೆ ಉತ್ತತ್ತಿ, ನಾರು, ಬದಾಮಿ, ಬಾಳೆ ಹಣ್ಣು ಹಾಗೂ ನಾಣ್ಯಗಳನ್ನು ಎಸೆದು ಹರಕೆ ತೀರಿಸಿದರು.