ಬದುಕು ರೂಪಿಸುವಲ್ಲಿ ಗುರುಗಳ ಪಾತ್ರ ಅಪಾರ

06raju5
Published on

ಚಾಮರಾಜನಗರ: ವಿದ್ಯೆ ಕಲಿತು ಉತ್ತಮ ಸ್ಥಾನಗಳಲ್ಲಿ ಸೇವೆ ಸಲ್ಲಿಸುವವರು, ಗುರುಗಳನ್ನು ನೆನೆಯುವುದು ಅಪರೂಪದ ಕಾರ್ಯಕ್ರಮವಾಗಿದೆ ಎಂದು ನಿವೃತ್ತ ಶಿಕ್ಷಕ ವೀರೇಶ್ವರ್ ಹೇಳಿದರು.

ತಾಲೂಕಿನ ಸಂತೇಮರಹಳ್ಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ವೆಂಕಟಯ್ಯನ ಛತ್ರದ ಸರ್ಕಾರಿ ಶಾಲೆಯ 1979-80ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ್ದ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕನಿಂದ ವಿದ್ಯೆ ಕಲಿತ ವಿದ್ಯಾರ್ಥಿ, ಎಂದಿಗೂ ಗುರುಗಳನ್ನು ಮರೆಯುವುದಿಲ್ಲ. ಗುರುವಿಗೆ ಗೌರವ ಕೊಡುವ ವಿದ್ಯಾರ್ಥಿ ಎತ್ತರಕ್ಕೆ ಬೆಳೆಯುತ್ತಾನೆ. ವಿದ್ಯೆಕಲಿತ ನಂತರ ಯಾವುದೇ ಕೆಲಸಗಳನ್ನು ಕೇವಲವಾಗಿ ಕಾಣದೇ, ಯಾವುದೇ ಕೆಲಸವನ್ನು ಪಡೆದುಕೊಂಡರು ಶ್ರದ್ಧೆಯಿಂದ ಮಾಡಿ. ತಮ್ಮ ವೃತ್ತಿಯಲ್ಲಿ ಯಶಸ್ಸು ಸಾಧಿಸಿ. ಗ್ರಾಮದ ಜನರ ಪ್ರೊತ್ಸಾಹವನ್ನು ಮರೆಯಲು ಸಾಧ್ಯವಿಲ್ಲ, ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಉತ್ಸಾಹದಿಂದ ಬರುತ್ತಿದ್ದರು ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ ಆರ್.ಎನ್.ಸುಂದರ್ ಮಾತನಾಡಿ, ಸಂತೋಷದ ವಿಷಯವೆಂದರೆ ಕೆಲವು ವಿದ್ಯಾರ್ಥಿಗಳು ನಾವು ಮಾಡಿದ ಪಾಠವನ್ನು ಈಗಲು ಮೆಲಕು ಹಾಕುತ್ತಾರೆ. ಶಿಕ್ಷಣ ವೃತ್ತಿ ನಮಗೆ ತೃಪ್ತಿ ತಂದಿದೆ. 13 ವರ್ಷ ವೆಂಕಟಯ್ಯನವಛತ್ರ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಲು ಸಹೋದ್ಯೋಗಿಗಳ ಸಹಕಾರ ಮುಖ್ಯ. ಆ ಸಮಯದಲ್ಲಿ ಎಲ್ಲರೂ ಉತ್ತಮ ರೀತಿಯಲ್ಲಿ ಸಹಕಾರ ಮಾಡಿದ್ದರು ಎಂದರು.

ನಿವೃತ್ತ ಶಿಕ್ಷಕ ಎಸ್.ವಂಗಶೆಟ್ಟಿ, ಸಿ.ಶ್ರೀನಿವಾಸ್, ಎಲೆಕ್ಟ್ರಿಕಲ್ ಗುತ್ತಿಗೆದಾರ ನಂಜುಂಡಸ್ವಾಮಿ,
ಹಳೆಯ ವಿದ್ಯಾರ್ಥಿಗಳಾದ ಡಾ.ನಂದೀಶ್, ಹೊಸೂರು ಜಗದೀಶ್, ಹೆಚ್.ಪಿ ಪ್ರಸಾದ್, ನರಸಿಂಹರಾಜು, ಲಿಂಗರಾಜು, ವಿ.ವಿ.ಅನಂತ, ಕುಮಾರಸ್ವಾಮಿ, ಶಿವಕುಮಾರ್, ಪ್ರಸಾದ್, ಮಹದೇವಯ್ಯ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net