ಶ್ರೀ ಸಿದ್ದೇಶ್ವರ ಸ್ವಾಮೀಜಿಗೆ ಗುರುನಮನ,  ನವನಗರದಲ್ಲಿ 28ರಿಂದ ಆರು ದಿನ ಪ್ರವಚನ

IMG-20241221-WA0010.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರ ಚಿಕ್ಕೇನಕೊಪ್ಪದ ಶ್ರೀ ಚನ್ನವಿರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸತ್ಸಂಗ ಹಾಗೂ ದಾಸೋಹ ಸೇವಾ ಸಮಿತಿ ವತಿಯಿಂದ ಶ್ರೀ ಸಿದ್ದೇಶ್ವರ ಸ್ವಾಮೀಜಿ 2ನೇ ವರ್ಷದ ಗುರು ನಮನ ಕಾರ್ಯಕ್ರಮವನ್ನು ಡಿ. 28ರಿಂದ ಆರು ದಿನಗಳವರೆಗೆ ಆಯೋಜಿಸಲಾಗಿದೆ.

ವಿಜಯಪುರ ಶ್ರೀ ಸಿದ್ದಲಿಂಗೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ನಿತ್ಯ ಸಂಜೆ 6ಕ್ಕೆ ಪ್ರವಚನ ನೀಡುವರು. ಡಿ. 29ರಂದು ಸಂಜೆ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು.

ಸವಣೂರು ದೊಡ್ಡಹುಣಸೆ ಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಬಳಗಾನೂರ ಸುಕ್ಷೇತ್ರದ ಶ್ರೀಶಿವಶಾಂತವೀರ ಶರಣರು ಉಪಸ್ಥಿತರಿರುವರು. ಸಂಗೀತ ಸೇವೆ ಪಂ. ಅಮರೇಶ ಗವಾಯಿಗಳು, ಪಂ. ಹನುಮಂತರಾಯ್ ತಬಲಾ ಸಾಥ್ ನೀಡುವರು.

ಜನೆವರಿ 2ರಂದು ಸಂಜೆ 6ಕ್ಕೆ ಪ್ರವಚನ ಮಂಗಲೋತ್ಸವ ನಡೆಯಲಿದ್ದು, ಶಿರಹಟ್ಟಿ ಭಾವ್ಯಕ್ಯ ಸಂಸ್ಥಾನ ಪೀಠದ ಶ್ರೀ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net