ಜ್ಞಾನಯೋಗಿ ಲಿಂ.ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ

Sri Siddeshwara Swamiji
Published on

ವಿಜಯಪುರ: ನಡೆದಾಡುವ ದೇವರು ಖ್ಯಾತಿಯ ಜ್ಞಾನಯೋಗಿ ಲಿಂ. ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ ಸಲ್ಲಿಸಲಾಗುತ್ತಿದ್ದು, ತನ್ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನಗರದ ಜ್ಞಾನಯೋಗಾಶ್ರಮದಲ್ಲಿ ಡಿ. 25ರಿಂದ 9 ದಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸುಧಾರಿತ ಕೃಷಿ, ಜ್ಞಾನ ಆರಾಧನೆ, ಗ್ರಾಮ ಸಂಸ್ಕೃತಿ, ಯೋಗ ಜೀವನ, ಮಾತೃ ಭಕ್ತಿ, ಜಾಗತಿಕ ತಾತ್ವಿಕ ಚಿಂತನೆಗಳು, ಸೇವಾಭಾವ, ಗುರುದೇವರ ಬದುಕು ಘೋಷವಾಕ್ಯದಡಿ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಜ. 1 ಮತ್ತು 2ರಂದು ಜ್ಞಾನಯೋಗಿ ಲಿಂ. ಸಿದ್ಧೇಶ್ವರ ಸ್ವಾಮೀಜಿಗಳಿಗೆ ಗುರುನಮನ ಸಮರ್ಪಣೆ ಜರುಗಲಿದೆ. ಜ. 1ರಂದು ಸಂಜೆ ದೀಪ ಬೆಳಗಿಸುವ ಮೂಲಕ ದೀಪೋತ್ಸವದೊಂದಿಗೆ ಜ್ಞಾನಯೋಗಿಗಳಿಗೆ ನಮನ ಸಲ್ಲಿಸಲಾಗುವುದು.

ಜ.2ರಂದು ಬೆಳಗ್ಗೆ 6 ಕ್ಕೆ ಜಪಯೋಗ, 7 ಗಂಟೆಗೆ ಪ್ರವಚನ, 8 ಗಂಟೆಗೆ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಗೆ ಪೂಜೆ ನೆರವೇರಲಿದೆ. ಬಳಿಕ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಗೀತ ನಮನ ಜರುಗಲಿದೆ. ನಾಡಿನ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಗುರುನಮನ ಹಳ್ಳಿ ಹಳ್ಳಿಗೂ ತಲುಪಿಸುವ ಯೋಚನೆ ಇದೆ. ಎಲ್ಲ ಗ್ರಾಮಗಳಿಂದ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಆಶ್ರಮದ ಅಧ್ಯಕ್ಷರಾದ ಪೂಜ್ಯ ಬಸವಲಿಂಗ ಸ್ವಾಮೀಜಿ ಹಾಗೂ ಹರ್ಷಾನಂದ ಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net