ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ

gurumurthy M
Published on

ಹುಬ್ಬಳ್ಳಿ: ನಗರದ ಗುರುಮೂರ್ತಿ ಮಾತರಂಗಿಮಠ ಅವರು ವಿನೂತನ ಸಾಧನೆಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ಪಡೆದಿದ್ದಾರೆ.

ಲೆಕ್ಕ ಪರಿಶೋಧಕ (ಸಿಎ)ರಾಗಿರುವ ಅವರು 2023ರ ಮೇ 11ರಿಂದ ಆಗಸ್ಟ್ 18ರವರೆಗೆ ಸತತ 100 ದಿನಗಳ ಕಾಲ ನಿತ್ಯ 50 ಕಿ.ಮೀ. ನಂತೆ 5000 ಕಿ.ಮೀ. ದೂರವನ್ನು ಸೈಕ್ಲಿಂಗ್​ನಲ್ಲಿ ಕ್ರಮಿಸಿದ್ದರು. 63ನೇ ವಯಸ್ಸಿನಲ್ಲಿ ಈ ಗುರಿಯನ್ನು ಸಾಧಿಸಿದ ಅತ್ಯಂತ ಹಿರಿಯ ವ್ಯಕ್ತಿಯೆಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ.

ಗುರುಮೂರ್ತಿ ಅವರು ಹುಬ್ಬಳ್ಳಿ ಬೈಸಿಕಲ್ ಕ್ಲಬ್​ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಇತರ ಸೈಕ್ಲಿಸ್ಟ್​ಗಳ ಜತೆ ಅವರು ದೆಹಲಿಯಿಂದ ವಾಘಾ ಬಾರ್ಡರ್​ವರೆಗೆ (550 ಕಿ.ಮೀ. ಮಾರ್ಗ) ಸೈಕ್ಲಿಂಗ್ ಮೂಲಕ ಕ್ರಮಿಸಿ ಭಾರತೀಯ ಸೈನಿಕರನ್ನು ಭೇಟಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net