ಸಂಭ್ರಮದ ವೀರಭದ್ರೇಶ್ವರ ಜಾತ್ರೆ

26gkl01
ಗುರುಮಠಕಲ್‌ನ ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಮಂಗಳವಾರ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಗಮನ ಸೆಳೆದ ಪುರವಂತರು.
Published on

ಗುರುಮಠಕಲ್: ಪಟ್ಟಣದ ನಾರಾಯಣಪುರ ಬಡಾವಣೆಯ ಶ್ರೀ ವೀರಭದ್ರೇಶ್ವರ ದೇವರ ಪಲ್ಲಕ್ಕಿ ಮತ್ತು ಅಗ್ಗಿ ತುಳಿಯುವ ಕಾರ್ಯ ಸಂಭ್ರಮದಿಂದ ಮಂಗಳವಾರ ನಡೆಯಿತು.

ಶ್ರಾವಣ ಮಾಸ ನಂತರದ ಎರಡನೇ ಮಂಗಳವಾರ ದೇವಸ್ಥಾನದ ಶ್ರೀ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ ಮಹಾ ಮಂಗಳಾರತಿ ನಡೆದವು. ವೀರಭದ್ರೇಶ್ವರ ಮೂರ್ತಿಯ ಪಲ್ಲಕ್ಕಿ ಉತ್ಸವದಲ್ಲಿ ಪುರವಂತರ ಸೇವೆ ನೋಡುಗರ ಗಮನ ಸೆಳೆಯಿತು.

ಅಗ್ನಿಕುಂಡದ ಬಳಿ ವೀರಭದ್ರೇಶ್ವರ ಜೈ ಘೋಷಗಳ ಮಧ್ಯೆ ಭಕ್ತರು ಅಗ್ಗಿ ತುಳಿಯುವ ಕರ‍್ಯವನ್ನು ನೋಡುಗರಲ್ಲಿ ಧನ್ಯತೆ ಭಾವ ಮೂಡಿಸಿತು.

ನಾಗಠಾಣ ಹಿರೇಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಸಗರ ಹಾಗೂ ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net