ಗುರುಲಿಂಗಪ್ಪ ಅಂಗಡಿ ಬಿಜೆಪಿ ಜಿಲ್ಲಾಧ್ಯಕ್ಷ

Gurulingappa Shop BJP District President
Gurulingappa Shop BJP District President
Published on

ವಿಜಯಪುರ: ವಿಜಯಪುರ ಜಿಲ್ಲಾ ಟಕದ ನೂತನ ಅಧ್ಯಕ್ಷರಾಗಿ ಗುರುಲಿಂಗಪ್ಪ ಅಂಗಡಿ ಆಯ್ಕೆಯಾಗಿದ್ದಾರೆ.

ಇಲ್ಲಿನ ವಿಶಾಲನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಕ್ಷದ ಸಭೆಯಲ್ಲಿ ನೂತನ ಅಧ್ಯಕ್ಷರ ಹೆಸರು ೂಷಿಸಲಾಯಿತು. ನಿಕಟಪೂರ್ವ ಜಿಲ್ಲಾಧ್ಯ ಆರ್​.ಎಸ್​. ಪಾಟೀಲ ನೂತನ ಅಧ್ಯರಿಗೆ ಶಾಲು ಹೊದಿಸಿ ಸಿಹಿ ತಿನಿಸುವ ಮೂಲಕ ಜವಾಬ್ದಾರಿ ಹಸ್ತಾಂತರಿಸಿ ಶುಭ ಹಾರೈಸಿದರು.

ಚುನಾವಣಾಧಿಕಾರಿಯಾಗಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯ ವಿವೇಕಾನಂದ ಡಬ್ಬಿ ಹಾಗೂ ವೀಕ ವಿ.ಪ. ಸದಸ್ಯ ಅಶ್ವತ್ಥ ಅವರು ಆಯ್ಕೆ ಪ್ರಕ್ರಿಯೆ ನಿರ್ವಹಿಸಿದರು.

ನಿಕಟಪೂರ್ವ ಜಿಲ್ಲಾಧ್ಯ ಆರ್​.ಎಸ್​. ಪಾಟೀಲ ಕುಚಬಾಳ ಮಾತನಾಡಿ, ನನ್ನ ಮೇಲೆ ವಿಶ್ವಾಸವಿರಿಸಿ ಎರಡು ಅವಧಿಗೆ ಜಿಲ್ಲಾಧ್ಯ ಸ್ಥಾನ ನೀಡಲಾಗಿತ್ತು. ಜಿಲ್ಲೆಯ ಪಕ್ಷದ ಶಾಸಕರು, ಮಾಜಿ ಶಾಸಕರು, ಸಂಸದರು, ಕಾರ್ಯಕರ್ತರು ಹಲವು ರೀತಿಯಿಂದ ಸಹಕಾರ ನೀಡಿ ನನಗೆ ಶಕ್ತಿ ತುಂಬಿದ್ದರು. ಸದ್ಯ ನೂತನ ಜಿಲ್ಲಾಧ್ಯರ ಸಾರಥ್ಯದಲ್ಲಿ ಪದ ಸಂಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುವ ಜತೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪದ ಹಿರಿಯ ನಾಯಕರು, ಕೇಂದ್ರದ ಮಾಜಿ ಸಚಿವರಾಗಿದ್ದವರು. ಅಲ್ಲದೆ, ನಮ್ಮ ಪಕ್ಷದ ಹಿರಿಯರು. ಅವರು ಕೇವಲ ವಿಜಯಪುರ ಜಿಲ್ಲೆಗೆ ಸೀಮಿತರಾದವರಲ್ಲ. ಕೇಂದ್ರ ಮಟ್ಟದ ನಾಯಕರಾಗಿರುವ ಅವರನ್ನು ಬಿಜೆಪಿ ಹಿರಿಯ ನಾಯಕರೇ ಮಾತನಾಡಿಸುತ್ತಾರೆ. ನಾನು ಚಿಕ್ಕವನು ಎಂದು ಪತ್ರಕರ್ತರ ಪ್ರಶ್ನಗೆ ಉತ್ತರಿಸಿದರು.

ಮಾಜಿ ಸಚಿವ ಎಸ್​.ಕೆ. ಬೆಳ್ಳುಬ್ಬಿ, ಮಾಜಿ ಶಾಸಕರಾದ ಎ.ಎಸ್​. ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯ ಚಂದ್ರಶೇಖರ ಕವಟಗಿ, ಮುಖಂಡರಾದ ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ಸಾಬು ಮಾಶ್ಯಾಳ, ಮಳುಗೌಡ ಪಾಟೀಲ, ಭೀಮಾಶಂಕರ ಹದನೂರ, ಸಂದೀಪ ಪಾಟೀಲ, ರಾಕೇಶ ಕುಲಕರ್ಣಿ, ವಿಜಯ ಜೋಶಿ ಮತ್ತಿತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net