ವಿದ್ಯಾರ್ಥಿನಿಯರಿಗೆ ದೀಕ್ಷೆ ಪ್ರದಾನ

PTR_9 JUN_3
Published on

ವಿಟ್ಲ: ಕೊಡಂಗಾಯಿ ಮೂರುಕಜೆ ಮೈತ್ರೇಯಿ ಗುರುಕುಲಂನಲ್ಲಿ ಧಾರ್ಮಿಕ ವಿಧಿ-ವಿಧಾನಗಳಿಂದ ಅಧಿಶೀಲ ಸ್ತರದ ೨೧ ಛಾತ್ರೆಯರು ಹಾಗೂ ಅಧಿಪ್ರಜ್ಞಾಸ್ತರದ ಇಬ್ಬರು ವಿದ್ಯಾರ್ಥಿನಿಯರಿಗೆ ದೀಕ್ಷಾ ಪ್ರದಾನ ನಡೆಯಿತು.

ಕರ್ನಾಟಕದ ೧೨ ಜಿಲ್ಲೆಗಳಿಂದ ಹಾಗೂ ಆಂಧ್ರ, ಕೇರಳ, ಗುಜರಾತ್, ಮಧ್ಯಪ್ರದೇಶದಿಂದ ೨೩ ಛಾತ್ರೆಯರ ಪ್ರವೇಶ ನಡೆಯಿತು.

ಕಟೀಲು ಕ್ಷೇತ್ರದ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ, ಯಾವ ಐಶ್ವರ್ಯವೂ ನಷ್ಟವಾದರೂ ಸರಸ್ವತಿ ನಮ್ಮನ್ನು ಬಿಡುವುದಿಲ್ಲ. ಹಾಗಾಗಿ ನಾವೆಲ್ಲರೂ ಸರಸ್ವತಿಯ ಆರಾಧಕರಾಗಬೇಕು ಎಂದು ತಿಳಿಸಿದರು.

ಉದ್ಯಮಿ ಸುಬ್ರಾಯ ಪೈ ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿ ಗುರುಕುಲದ ಪರಿಚಯ ನಡೆಸಿದರು. ವನಜಾ ಸ್ವಾಗತಿಸಿದರು. ಪ್ರತ್ನಸಲಕ್ಷ್ಮೀ ಆರ್ಯಾ ವಂದಿಸಿದರು. ನಂದಾ ಆರ್ಯಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net