ಸಿದ್ಧಾರೂಢ ಮಠಕ್ಕೆ ಸಂಗೀತ ಗುರುಗಳ ಭೇಟಿ

IMG_20250813_201230_146.jpg
Published on

ಹುಬ್ಬಳ್ಳಿ: ಲಕ್ನೋ ಘರಾನಾದ ಪ್ರಸಿದ್ಧ ಕಥಕ್ ಪ್ರವರ್ತಕರಾದ ಗುರು ಸುಭಾಸಚಂದ್ರ ಇವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದರು.

ಶ್ರೀಮಠದ ವತಿಯಿಂದ ಅವರನ್ನು ಗೌರವಿಸಲಾಯಿತು. ಟ್ರಸ್ಟ್ ಕಮಿಟಿ ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ಗೀತಾ ಕಲಬುರ್ಗಿ, ವ್ಯವಸ್ಥಾಪಕ ಈರಣ್ಣ ತುಪ್ಪದ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net