ವಾಘಾ ಗಡಿಯಲ್ಲಿ ಬಲಿಷ್ಠ ಭಾರತ ಮೆಗಾ ಇವೆಂಟ್

Strong India Event
Published on

ಗುರುಗುಂಟಾ: ಭಾರತ-ಪಾಕಿಸ್ತಾನ ನಡುವಿನ ವಾಘಾ ಗಡಿಯಲ್ಲಿ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದಿಂದ ಏಕ್ ಭಾರತ್, ಶ್ರೇಷ್ಠ ಭಾರತ್, ಬಲಿಷ್ಠ ಭಾರತ್ ಮೆಗಾ ಇವೆಂಟ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಹಿರಿಯ ಉಪಾಧ್ಯಕ್ಷ ಆನಂದ ತುರ್ವಿಹಾಳ ತಿಳಿಸಿದ್ದಾರೆ.

ಒಂದು ವಾಸವಿ ಯುವಜನ ಸಂಘದಿಂದ 6 ಜನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿರುವ 335 ವಾಸವಿ ಯುವಜನ ಸಂಘಗಳ ಪೈಕಿ ಬಹುತೇಕ ಸಂಘಗಳಿಂದ ಒಟ್ಟು 900 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸೆ.3ರಂದು ಆಯಾ ಜಿಲ್ಲೆಗಳಿಂದ ಪ್ರತಿನಿಧಿಗಳು ರೈಲುಗಳಲ್ಲಿ ಪ್ರಯಾಣಿಸಿ ಸೆ.5 ರಂದು ದೆಹಲಿ ತಲುಪಲಿದ್ದಾರೆ. ಸೆ.7ರಂದು ಸಮಾವೇಶ ಮತ್ತು 1500 ಅಡಿ ಉದ್ದದ ರಾಷ್ಟ್ರಧ್ವಜದ ಫ್ಲಾಗಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗುವುದು. ಸಮಾವೇಶದಲ್ಲಿ ಆರ್ಯವೈಶ್ಯ ಗುರುಗಳಾದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಸಾನ್ನಿಧ್ಯ ವಹಿಸಲಿದ್ದಾರೆ. ಸಮುದಾಯದ ಶಾಸಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಅಧಿಕಾರಿಗಳು, ಪಂಜಾಬ್ ಜನ ಪ್ರತಿನಿಧಿಗಳು, ವಾಘಾ ಗಡಿಯಲ್ಲಿ ಸೇವಾನಿರತ ಸೇನಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಯುವಜನ ಸಮಾಸಭಾ ಅಧ್ಯಕ್ಷ ಜಿ.ಪಿ.ನಾಗೇಶ ವಹಿಸಲಿದ್ದಾರೆಂದು ಆನಂದ ತುರ್ವಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net