ಅಳವಡಿಸಿದ ಆರು ಗಂಟೆಗಳಲ್ಲೇ ಸುಟ್ಟ ಟಿಸಿ

gurgunta-1
ಗುರುಗುಂಟಾ ನಾಲ್ಕನೇ ವಾರ್ಡ್‌ನಲ್ಲಿ ಸುಟ್ಟ ವಿದ್ಯುತ್ ಪರಿವರ್ತಕ.
Published on

ಗುರುಗುಂಟಾ: ನಾಲ್ಕನೇ ವಾರ್ಡ್‌ನಲ್ಲಿ ಜೆಸ್ಕಾಂ ಬುಧವಾರ ಅಳವಡಿಸಿದ್ದ ಟಿಸಿ ಆರು ಗಂಟೆಗಳಲ್ಲೇ ಸುಟ್ಟು ಮತ್ತೆ ನಿವಾಸಿಗಳನ್ನು ಕತ್ತಲೆಗೆ ದೂಡಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ನಾಲ್ಕನೇ ವಾರ್ಡ್‌ನ ಬಡಾವಣೆಗೆ ವಿದ್ಯುತ್ ಪೂರೈಸುವ 63 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಕಳೆದ ಭಾನುವಾರ ಸುಟ್ಟಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳು ಜೆಸ್ಕಾಂಗೆ ದೂರು ಸಲ್ಲಿಸಿ ಬೇರೊಂದು ಟಿಸಿ ಅಳವಡಿಸಲು ಅಲವತ್ತುಕೊಂಡಿದ್ದರು.

ರಿಪೇರಿಗೊಂಡ ಟಿಸಿಯನ್ನು ಜೆಸ್ಕಾಂ ಸಿಬ್ಬಂದಿ ಅಳವಡಿಸಿದ್ದರು. ಮೂರು ದಿನಗಳಿಂದ ಕತ್ತಲೆಯಲ್ಲಿ ಕಾಲ ಕಳೆದ ನಿವಾಸಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ, ಅದು ಕೂಡ ಕೇವಲ ಆರು ಗಂಟೆಗಳಲ್ಲಿ ಸುಟ್ಟಿದ್ದು, ಟಿಸಿಯ ಗುಣಮಟ್ಟದ ಬಗ್ಗೆ ಜನ ಅನುಮಾನ ಪಡುವಂತೆ ಮಾಡಿದೆ.

ಈ ರೀತಿ ಪದೇಪದೆ ಟಿಸಿ ಸುಟ್ಟು ಸಂಕಷ್ಟದಲ್ಲಿ ದೂಡುವ ದಿನಗಳಿಗೆ ಕೊನೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ಕೇಳಲು ಜೆಸ್ಕಾಂ ಎಇಇಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net