ಗುರುಚನ್ನವೀರ ಶಿವಯೋಗಿ ಶ್ರೀಗಳ ಭಾವಚಿತ್ರ ಮೆರವಣಿಗೆ

1grgntphoto7 capson ರಾಯದುರ್ಗದ ವೈರಾಗ್ಯವೀರ ಗುರು ಚನ್ನವೀರ ಶಿವಯೋಗಿಗಳ ಚಿತ್ರ
ಗುರು ಚನ್ನವೀರ ಶಿವಯೋಗಿ
Published on

ಗುರುಗುಂಟ: ರಾಯದುರ್ಗದಲ್ಲಿ ವೈರಾಗ್ಯವೀರ ಶ್ರೀ ಗುರುಚನ್ನವೀರ ಶಿವಯೋಗಿಗಳ 25ನೇ ಪುಣ್ಯಾರಾಧನೆ ಅಂಗವಾಗಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.


ಭುಗಲಗಟ್ಟಿಯಿಂದ ರಾಯದುರ್ಗದವರೆಗೆ ಶ್ರೀಗಳ ಭಾವಚಿತ್ರವನ್ನು ಸುಮಂಗಲೆಯರ ಕುಂಭ-ಕಳಸ, ಸಕಲ ವಾದ್ಯ-ಮೇಳದೊಂದಿಗೆ ಪುರವಂತಿಕೆ ಸೇವೆ ಮೂಲಕ ಪಲ್ಲಕ್ಕಿ ಸೇವೆ ಮಾಡಲಾಯಿತು.


ಭಾನುವಾರ ಶ್ರೀಗಳ ಗದ್ದುಗೆ ಬೆಳಗ್ಗೆ ರುದ್ರಾಭಿಷೇಕ, ಸಾಮೂಹಿಕ ವಿವಾಹ ಮಹೋತ್ಸವ, ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ. ಬನವಾಸಿ ಗ್ರಾಮದ ಭಕ್ತರು ತೇರು ಎಳೆಯುವ ಮಿಣಿ, ಕಳಸ ರಾಯದುರ್ಗ ಮಠಕ್ಕೆ ತರುವ ಸೇವೆಯಲ್ಲಿ ನಿರತರಾಗಿದ್ದಾರೆ. ಪುಣ್ಯಾರಾಧನೆ ಅಂಗವಾಗಿ 11 ದಿನಗಳ ಕಾಲದ ಶ್ರೀಗಳ ಪುರಾಣವನ್ನು ಬಳಗಾನೂರಿನ ವೇದಮೂರ್ತಿ ಶರಭಯ್ಯ ಶಾಸ್ತ್ರಿ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net