ಸಹಾನುಭೂತಿ ಹೆಚ್ಚಿಸುವ ಮಾಸ

ಗುರುಗುಂಟಾ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಗುರುಗುಂಟಾ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
Published on

ಗುರುಗುಂಟಾ: ರಂಜಾನ್ ಹಬ್ಬವನ್ನು ಮುಸ್ಲಿಮರು ಸೋಮವಾರ ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಆಚರಿಸಿದರು.

ಇದಕ್ಕೂ ಮುನ್ನ ಜಾಮಿಯಾ ಮಸೀದಿಯಿಂದ ಹೊರ ವಲಯದ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಧರ್ಮಗುರು ಸೈಯದ್ ಜಾಫರ್ ಹುಸೇನ್ ಖಾಜಿ ಮಾತನಾಡಿ, ಲೌಕಿಕ ಸುಖಗಳಿಂದ ದೂರವಿದ್ದು, ಇಸ್ಲಾಂನ ತತ್ವಗಳೊಂದಿಗೆ ಎಣೆದುಕೊಂಡಿರುವ ಈ ಪವಿತ್ರ ರಂಜಾನ್ ಮಾಸವು ಜಟಿಲ ಹೃದಯವನ್ನು ಇಲಾಹಿ ಚಿಂತನೆಗಳೆಂಬ ಅಭಿಷೇಕದಿಂದ ಶುದ್ಧೀಕರಿಸಿ, ಸಹಾನುಭೂತಿ ಹೆಚ್ಚಿಸುವ ಸುವರ್ಣಾವಕಾಶ ಒದಗಿಸಿಕೊಟ್ಟಿದೆ ಎಂದರು.

ಧರ್ಮಗುರು ಮೀರ್ಷಾಹುಸೇನ್ ಖಾಜಿ, ಜಾಮಿಯಾ ಮಸೀದಿಯ ಇಮಾಮ್ ಇಸ್ಮಾಯಿಲ್ ಸಾಬ್, ಜಾಮಿಯಾ ಮಸೀದಿ ಅಧ್ಯಕ್ಷ ಸದರ್ ಸೈಯದ್ ಅಭಿಬುಲ್ಲಾ, ಉಪಾಧ್ಯಕ್ಷ ಮೀರ್‌ಸಾಬ್, ಕಾರ್ಯದರ್ಶಿ ಪಾಷಾ ದಿಡ್ಡಿಮನಿ, ಖಜಾಂಚಿ ಅಜೀಮ್ ಸಾಬ್, ಪ್ರಮುಖರಾದ ಡಾ.ಚಾಂದ್‌ಪಾಷಾ, ಬಾಬು ದಿಡ್ಡಿಮನಿ, ವಕೀಲ ಆಶೀಕ್ ಅಹ್ಮದ್, ಸೈಯದ್ ಇಸ್ಮಾಯಿಲ್, ಡಾ. ಸುಬಾನಿ, ಕರೀಂ ಸಾಬ್ ಜಬಡಿ, ಶೇಕ್‌ಬಾಬು, ಬಬಲು, ಮೋಬಿನ್ ಗುಟ್ಟು, ಲಾಲ್‌ಸಾಬ್ ಬೆಂಚಲದೊಡ್ಡಿ, ಜಿಲಾನಿ ಜಬಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net