ನವದಂಪತಿ ನಡುವೆ ಹೊಂದಾಣಿಕೆ ಅಗತ್ಯ

gurugunta mass marriage
ಗುರುಗುಂಟಾ ಸಮೀಪದ ರಾಯದುರ್ಗ ಚನ್ನಯ್ಯ ತಾತನ ಮಠದಲ್ಲಿ ಬುಧವಾರ ಸಾಮೂಹಿಕ ವಿವಾಹ ಜರುಗಿತು.
Published on

ಗುರುಗುಂಟಾ: ದಾಂಪತ್ಯಕ್ಕೆ ಕಾಲಿರಿಸಿದ ನವಜೋಡಿಗಳು ಹೊಂದಾಣಿಕೆಯಿಂದ ಸಹಬಾಳ್ವೆ ನಡೆಸಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಲಿಂಗಸುಗೂರು ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೇದಾರ್ ಹೇಳಿದರು.

ರಾಯದುರ್ಗಾದ ಚನ್ನಯ್ಯ ತಾತನ ಮಠದಲ್ಲಿ ವೈರಾಗ್ಯವೀರ ಶ್ರೀ ಗುರು ಚನ್ನವೀರ ಶಿವಯೋಗಿಗಳ ಪುಣ್ಯಾರಾಧನೆ ಹಾಗೂ ಜಾತ್ರೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ, ಧರ್ಮಸಭೆಯಲ್ಲಿ ಮಾತನಾಡಿದರು. ನವದಂಪತಿಗಳು ಆದರ್ಶ ಗುಣಗಳು ಹಾಗೂ ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಬೇಕು. ಸಾಮೂಹಿಕ ವಿವಾಹದಿಂದ ಆರ್ಥಿಕ ಹೊರೆ ತಗ್ಗಲಿದ್ದು, ಬಡ ಕುಟುಂಬಗಳಿಗೆ ಸಹಕಾರಿಯಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ಅರಳಹಳ್ಳಿ ಚನ್ನಯ್ಯಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 21 ಜೋಡಿಗಳು ನವ ಜೀವನಕ್ಕೆ ಕಾಲಿರಿಸಿದರು. ಕಕ್ಕೇರಿ ಸೋಮನಾಥ ದೇವರ ಪೂಜಾರಿ ನಂದಣ್ಣಪ್ಪ, ಪ್ರಮುಖರಾದ ಬಸನಗೌಡ ಹರ್ವಾಪುರ, ಅಮರೇಶ ಗುತ್ತೇದಾರ್, ಪೈದೊಡ್ಡಿ ಗ್ರಾಪಂ ಅಧ್ಯಕ್ಷ ಬಸ್ಸಣ್ಣ ಮಂಗ್ಯಾಳ್, ವೇದಮೂರ್ತಿ ಬಸವರಾಜಸ್ವಾಮಿ ನಂದಿಕೋಲಮಠ, ಚಂದಪ್ಪ ಜೋಗರ್, ಹನುಮಂತ, ಅಮರಪ್ಪ, ಗ್ರಾಪಂ ಸದಸ್ಯ ದುರುಗಪ್ಪ, ಮಾನಪ್ಪ, ಪರಮಣ್ಣ ಸಾಹುಕಾರ ಕಕ್ಕೇರಿ, ಪುರಾಣ ಪ್ರವಚನಕಾರ ವೇದಮೂರ್ತಿ ಶರಭಯ್ಯಶಾಸ್ತ್ರಿ ಸೇರಿದಂತೆ ಬನವಾಸಿ, ತುಪ್ಪದೂರು, ಹಾಲಾಪುರ, ಹರ್ವಾಪುರ ಭಕ್ತರು ಇದ್ದರು. ಸಂಜೆ ಮಹಾರಥೋತ್ಸವ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net