

ಗುರುಗುಂಟಾ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಜೆಸ್ಕಾಂನಿಂದ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ ನಡೆಯಿತು. ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಯ ಸರಿಪಡಿಸುವಂತೆ ಗ್ರಾಹಕರನ್ನು ಆಗ್ರಹಿಸಿದರು.
ಜೆಸ್ಕಾಂ ಎಇಇ ಕೆಂಚಪ್ಪ ಭಾವಿಮನಿ ಮಾತನಾಡಿ, ಪ್ರತಿ ತಿಂಗಳು ಎರಡು ಹೋಬಳಿಗಳನ್ನು ಆಯ್ಕೆ ಮಾಡಿ ಗ್ರಾಹಕರ ಸಂವಾದ ಸಭೆ ಏರ್ಪಡಿಸಲಾಗುತ್ತಿದೆ. ರೈತರಿಗೆ ಹಾಗೂ ಕುಡಿಯುವ ನೀರಿಗೆ ವಿದ್ಯುತ್ ಅಭಾವವಾಗದಂತೆ ಸಮಸ್ಯೆಗಳನ್ನು ಆಲಿಸಿ ಇತ್ಯರ್ಥಪಡಿಸಲು ಸಭೆ ಪೂರಕವಾಗಿದೆ. ಇಲಾಖೆಯ ಸಿಬ್ಬಂದಿ ವಿದ್ಯುತ್ ವ್ಯತಯವಾಗದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಆದರೂ, ಕೆಲವು ಸಲ ತೊಂದರೆಯಾದಾಗ ಸಹಕರಿಸಬೇಕೆಂದು ಕೋರಿದರು.
ಗ್ರಾಹಕರ ಕೆಲವು ಬೇಡಿಕೆಗಳಿಗೆ ಇಲಾಖೆಯ ನಿಯಮಾನುಸಾರ ಸ್ಪಂದಿಸಲು ತೊಡಕುಗಳಿವೆ. ಹೀಗಾಗಿ ಮೀಟರ್ ಅಳವಡಿಸಿ ಸಂಖ್ಯೆ ತೋರಿಸಿದರೆ ಅಂತಹ ಪ್ರದೇಶದಲ್ಲಿ ಟಿಸಿ ಅಳವಡಿಸಲಾಗುವುದು ಎಂದು ಕೆಂಚಪ್ಪ ಭಾವಿಮನಿ ತಿಳಿಸಿದರು. ಅಧಿಕಾರಿಗಳಾದ ಮಂಜುನಾಥ, ದೇವರಾಜ, ಬಸವರಾಜ, ಗ್ರಾಪಂ ಸದಸ್ಯರಾದ ಬಾಬು ದಿಡ್ಡಿಮನಿ, ಚಂದ್ರಶೇಖರ ನಾಯಕ, ಅಮರೇಶ ರತ್ನಗಿರಿ, ಆದೇಶ ಕುಂಬಾರ, ಪ್ರಮುಖರಾದ ಅಮರೇಶ ರತ್ನಗಿರಿ, ಸೋಮು ನಾಯಕ, ರಾಜಕುಮಾರ, ಲಾಲ್ ಸಾಬ್, ಖಾದರಸಾಬ್, ತಿಪ್ಪಣ್ಣ ಹವಾಲ್ದಾರ್, ಪ್ರಸಾದರೆಡ್ಡಿ ಇದ್ದರು.