ಮನಸು, ದೇಹ ಒಗ್ಗೂಡಿಸುವ ವಿಜ್ಞಾನ ಯೋಗ, ಜಿಲ್ಲಾ ಪತಂಜಲಿ ಸಮಿತಿ ಅಧ್ಯಕ್ಷ ಆನಂದ ಪತ್ತಾರ್ ಹೇಳಿಕೆ

Gurugunta Free Yoga Camp concludes
ಗುರುಗುಂಟಾದಲ್ಲಿ ಉಚಿತ ಯೋಗ ಶಿಬಿರ ಸಮಾರೋಪ ಸಮಾರಂಭದಲ್ಲಿ ಶ್ರೀದೇವಿ ಅಯ್ಯಪ್ಪಸ್ವಾಮಿ ಧ್ಯಾನಮಂದಿರದ ಅಧ್ಯಕ್ಷ ಕೃಷ್ಣಾಶ್ರೇಷ್ಠಿ ಕಿನ್ನಾಳರನ್ನು ಶಿಬಿರಾರ್ಥಿಗಳು ಸನ್ಮಾನಿಸಿದರು.
Published on

ಗುರುಗುಂಟಾ: ಯೋಗ ದೈಹಿಕ ವ್ಯಾಯಾಮವಷ್ಟೇ ಅಲ್ಲ. ಅದು ಮನಸು ಮತ್ತು ದೇಹವನ್ನು ಒಗ್ಗೂಡಿಸುವ ವಿಜ್ಞಾನವಾಗಿದೆ ಎಂದು ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಆನಂದ ಪತ್ತಾರ್ ಹೇಳಿದರು.

ಪಟ್ಟಣದ ಶ್ರೀದೇವಿ ಅಯ್ಯಪ್ಪಸ್ವಾಮಿ ಧ್ಯಾನ ಮಂದಿರದಲ್ಲಿ ವಾಸವಿ ಯುವಜನ ಸಂಘ, ವಾಸವಿ ಮಹಿಳಾ ಸಂಘ ಹಾಗೂ ಪತಂಜಲಿ ಯೋಗ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನಿತ್ಯ ಜೀವನದಲ್ಲಿ ಯೋಗ ಮತ್ತು ಪ್ರಾಣಾಯಮ ಅಳವಡಿಸಿಕೊಂಡು ರೋಗದಿಂದ ವಿಯೋಗ ಹೊಂದಿ ಎಂದರು.

ಶಿಬಿರಾರ್ಥಿಗಳಾದ ಮಾಣಿಕ ಮಿರಿಯಾಳ್, ಶಿಕ್ಷಕ ರಾಘವೇಂದ್ರ ಆಳಂದ್, ಸಿದ್ರಾಮಪ್ಪ ಕೋರಿ, ಆರ್.ಸಂಗೀತಾ, ಹೇಮಾ ಕಿನ್ನಾಳ, ವೀಣಾ ಕೋರಿ ಶಿಬಿರದ ಕುರಿತು ಅನಿಸಿಕೆ ಹಂಚಿಕೊಂಡರು. ಯೋಗ ಸಮಿತಿ ತಾಲೂಕು ಅಧ್ಯಕ್ಷ ಈರಣ್ಣ ಗುರುಸ್ವಾಮಿ, ಶ್ರೀದೇವಿ ಅಯ್ಯಪ್ಪಸ್ವಾಮಿ ಧ್ಯಾನ ಮಂದಿರದ ಅಧ್ಯಕ್ಷ ಕೃಷ್ಣಾಶ್ರೇಷ್ಠಿ ಕಿನ್ನಾಳ, ಗೌರವಾಧ್ಯಕ್ಷ ಆನಂದ ತುರ್ವಿಹಾಳ್, ಶಿಕ್ಷಕ ಅಶೋಕ ವಿಜಯಪುರ, ಡಾ.ವಿಕ್ರಂ ಪಾಟೀಲ್, ಆರ್.ವಿಜಯಲಕ್ಷ್ಮೀ, ಆರ್.ವಿದ್ಯಾಧರ, ಶರಣಪ್ಪ ಸಜ್ಜನ್, ಡಾ.ನಾಗರಾಜ ಕುಂಬಾರ, ನಾಗರಾಜ ಶಿಂಧೆ, ಆರ್.ಪ್ರದೀಪ, ವಾಸವಿ ಮಹಿಳಾ ಸಂಘದ ಕೋಶಾಧ್ಯಕ್ಷೆ ಭಾರತಿ ಕಿನ್ನಾಳ, ಡಾ.ಪ್ರಿಯಾಂಕಾ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net