ಹೋರಾಟದಲ್ಲಿ ಪ್ರಾಮಾಣಿಕತೆ ಇರಲಿ

14112022 gurugunta kannada rajyostava
Published on

ಗುರುಗುಂಟಾ: ಕನ್ನಡ ನಾಡು, ನುಡಿ, ನೆಲ-ಜಲ, ಗಡಿ ವಿವಾದ ಸೇರಿದಂತೆ ವಿಷಯ ಯಾವುದೇ ಇರಲಿ ಹೋರಾಟ ಮಾತ್ರ ಸಂಘಟನೆಯ ತತ್ವ ಸಿದ್ಧಾಂತಗಳೊಂದಿಗೆ ಪ್ರಾಮಾಣಿಕತೆಯಿಂದ ಕೂಡಿರಲಿ ಎಂದು ಮಾಜಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ಡಿ.ವಜ್ಜಲ್ ಹೇಳಿದರು.

ಸ್ಥಳೀಯ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಸಂಜೆ ಕನ್ನಡ ಸೇನೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಅತ್ಯುನ್ನತ ಸಾಹಿತ್ಯಕ ಪ್ರಶಸ್ತಿಯಾದ 8 ಜ್ಞಾನಪೀಠ ಬಾಚಿಕೊಂಡು ಕೀರ್ತಿ ಕರ್ನಾಟಕಕ್ಕಿದೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ನಾಡು, ನುಡಿ, ಜಲ-ನೆಲ, ಗಡಿ ವಿಷಯದೊಂದಿಗೆ ಕರೊನಾ ಸಂದರ್ಭದಲ್ಲಿ ಕನ್ನಡ ಸಂಘಟನೆಗಳು, ಸಾಹಿತಿಗಳ ಮತ್ತು ಚಿತ್ರನಟರ ಸೇವೆ ಅವಿಸ್ಮರಣೀಯ. ನೊಂದ ಜೀವಗಳಿಗೆ ಸಾಂತ್ವನ ನೀಡಿದ್ದಾರೆ ಎಂದು ಗುಣಗಾನ ಮಾಡಿದರು.

ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸದೃಢ ಆರೋಗ್ಯ ಕಾಪಾಡಿಕೊಂಡು ಭಾಷಾಭಿಮಾನದೊಂದಿಗೆ ದೇಶಾಭಿಮಾನ ಬೆಳಸಿಕೊಂಡು ಬಾಳಬೇಕೆಂದು ಮಾನಪ್ಪ ಡಿ.ವಜ್ಜಲ್ ಸಲಹೆ ನೀಡಿದರು. ನಟ ಪುನೀತ್ ರಾಜಕುಮಾರ್ ಸಮಾಜ ಸೇವೆ ಸ್ಮರಿಸಿದರು. ಗೊಲಪಲ್ಲಿ ವಾಲ್ಮೀಕಿ ಪೀಠದ ವರದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net