ಧರ್ಮದ ಅರಿವು ಮೂಡಿಸುವ ಕಾರ್ಯವಾಗಲಿ

UNTILETED (5)
ಗುರುಗುಂಟಾದಲ್ಲಿ ಅಂಬಾಭವಾನಿದೇವಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯನ್ನು ರಾಜಾ ಸೋಮನಾಥ ನಾಯಕ ಉದ್ಘಾಟಿಸಿದರು. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ರಾಜು ಬಳಮಕರ್ , ಲಿಂಗಸುಗೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ವಾಲ್ಮೀಕಿ ನಾಯಕ ಸಮಾಜದ ಲಿಂಗಸುಗೂರು ತಾಲೂಕು ಮಾಜಿ ಅಧ್ಯಕ್ಷ ನಂದೀಶ ನಾಯಕ, ಪಿಎಂಸಿ ಮಾಜಿ ನಿರ್ದೇಶಕ ಗಜೇಂದ್ರನಾಯಕ, ಪ್ರಮುಖರಾದ ರಾಜಾ ಶ್ರೀನಿವಾಸ ನಾಯಕ ಕೋಠಾ ಇತರರಿದ್ದರು.
Published on

ಗುರುಗುಂಟಾ: ಶಿಸ್ತು, ಸಂಘಟನೆಗೆ, ಧರ್ಮದ ವಿಚಾರದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಒಂದು ಹೆಜ್ಜೆ ಮುಂದೆ ಎಂದು ಸಂಸ್ಥಾನಿಕ ರಾಜಾ ಸೋಮನಾಥ ನಾಯಕ ಹೇಳಿದರು.

ಗ್ರಾಮದಲ್ಲಿ ಭಾವಸಾರ ಕ್ಷತ್ರಿಯ ಸಮಾಜದಿಂದ ಅಂಬಾಭವಾನಿ ದೇವಿ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕುಟುಂಬಗಳ ಸಂಖ್ಯೆಯಲ್ಲಿ ಸಣ್ಣ ಸಮಾಜವಾದರೂ ಉತ್ತಮ ನಡವಳಿಕೆಯಿಂದ ಹೆಸರುವಾಸಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಗೈಯಲ್ಲಿ ಜಗತ್ತನ್ನು ನೋಡುವ ಇಂದಿನ ಮಕ್ಕಳಿಗೆ ಭಾರತೀಯ ಭವ್ಯ ಪರಂಪರೆ, ಸಂಸ್ಕಾರ-ಸಂಸ್ಕೃತಿ ಹಾಗೂ ಸನಾತನ ಧರ್ಮದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಲಿಂಗಸುಗೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ವಾಲ್ಮೀಕಿ ನಾಯಕ ಸಮಾಜದ ಲಿಂಗಸುಗೂರು ತಾಲೂಕು ಮಾಜಿ ಅಧ್ಯಕ್ಷ ನಂದೀಶ ನಾಯಕ, ವಾಸವಿ ಯುವಜನ ಸಂಘದ ಅಧ್ಯಕ್ಷ ಆನಂದ ತುರ್ವಿಹಾಳ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಮತ್ತು ದೇಗುಲ ನಿರ್ಮಾಣಕ್ಕೆ ಶ್ರಮಿಸಿದ ಪ್ರಮುಖರನ್ನು ಸನ್ಮಾನಿಸಲಾಯಿತು. ಮಾಧವ ಭಟ್ಟರ ಪುರೋಹಿತರ ತಂಡದಿಂದ ಪ್ರಾಣ ಪ್ರತಿಷ್ಠಾಪನ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಿದವು. ಲತಾ ರೂಪಾ ಸಂಗಡಿಗರು ಪ್ರಾರ್ಥಿಸಿದರು.

ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ರಾಜು ಬಳಮಕರ್ ಅಧ್ಯಕ್ಷತೆ ವಹಿಸಿದ್ದರು. ಸುಭಾಸ್ ಬಳಮಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಗಸುಗೂರು ತಾಪಂ ಮಾಜಿ ಅಧ್ಯಕ್ಷ ರಾಜಾ ನರಸಿಂಹ ನಾಯಕ, ಎಪಿಎಂಸಿ ಮಾಜಿ ನಿರ್ದೇಶಕ ಗಜೇಂದ್ರ ನಾಯಕ, ಪ್ರಮುಖರಾದ ರಾಜಾ ಶ್ರೀನಿವಾಸ ನಾಯಕ ಕೋಠಾ, ವಿಶ್ವನಾಥ ಪಟ್ಟಣಶೆಟ್ಟಿ, ಚನ್ನಯ್ಯಸ್ವಾಮಿ ಹೊರಪೇಟೆಮಠ, ಬಾಬುಸಾಬ್ ದಿಡ್ಡಿಮನಿ, ಕೃಷ್ಣಾಶೆಟ್ಟಿ ಕಿನ್ನಾಳ್, ವೆಂಕಣ್ಣ ಪತ್ತಾರ್ ಇದ್ದರು. ಸಾವನ್ ಹಾಗು ಸಂಕೇತ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net