ಶಿಕ್ಷಣ ಸಂಸ್ಕಾರವಾದಾಗ ಸಾರ್ಥಕ

Gurugunta Akshara Program
ಗುರುಗುಂಟಾ ಸಮೀಪದ ದೇವರಭೂಪುರಿನ ಶ್ರೀ ಅಮರೇಶ್ವರ ವಿದ್ಯಾಮಂದಿರದಲ್ಲಿ ಅಭಿನವ ಗುರುಗಜದಂಡ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಅಕ್ಷರ ಅಭ್ಯಾಸ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷ ಗಂಗಾಧರಯ್ಯಸ್ವಾಮಿ, ನೀಲಕಂಠಯ್ಯಸ್ವಾಮಿ, ಶಿಕ್ಷಕಿಯರಾದ ಸರೋಜಿನಿ, ಶ್ರುತಿ, ದುರ್ಗಮ್ಮ ಇದ್ದರು.
Published on

ಗುರುಗುಂಟಾ: ಮಕ್ಕಳಲ್ಲಿ ಅಕ್ಷರ ಅಭ್ಯಾಸ ಮಾಡಿಸುವ ಅವಶ್ಯವಿದೆ ಎಂದು ಅಭಿನವ ಗುರುಗಜದಂಡ ಶಿವಾಚಾರ್ಯರು ಹೇಳಿದರು.

ದೇವರಭೂಪೂರಿನ ಶ್ರೀ ಅಮರೇಶ್ವರ ವಿದ್ಯಾಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸ ನೆರವೇರಿಸಿ ಮಾತನಾಡಿದರು. ನಮ್ಮ ಸನಾತನ ಪರಂಪರೆಯಲ್ಲಿ ಷೋಡಶ ಸಂಸ್ಕಾರಗಳಿದ್ದು, ಅದರಲ್ಲಿ ಅಕ್ಷರ ಅಭ್ಯಾಸವೂ ಒಂದಾಗಿದೆ. ಯಾವುದಕ್ಕೆ ಅಳಿ ವಿಲ್ಲವೋ ಅದು ಅಕ್ಷರವಾಗಿದೆ ಎಂದರು.

ಇಂದಿನ ಸ್ಪರ್ಧಾ ತ್ಮಕ ಜಗತ್ತಿನಲ್ಲಿ ಮುಂದೆ ಬರಬೇಕಾದರೆ ಇಂತಹ ಸಂಸ್ಕಾರ ಯುತ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಶಿಕ್ಷಣವೆಂಬುದು ಸಂಸ್ಕಾರವಾಗಬೇಕೇ ಹೊರತು ಸರ್ಟಿಫಿಕೇಟ್ ಆಗಬಾರದು. ವಿದ್ಯೆಯನ್ನು ಕಲಿತರೆ ಸಾಲದು ತಂದೆ -ತಾಯಿ, ಗುರು ಹಿರಿಯರಿಗೆ ಗೌರವ ಕೊಟ್ಟಾಗ ಕಲಿತ ವಿದ್ಯೆ ಸಾರ್ಥಕವಾಗಲಿದೆ ಎಂದು ಶ್ರೀ ಗಳು ತಿಳಿಸಿದರು.

ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ವಿತರಿಸಲಾ ಯಿತು. ಪ್ರಮುಖರಾದ ಸಿದ್ದಯ್ಯ ಸ್ವಾಮಿ, ಅಮರೇಶ ತಿಳಿ, ಮಲ್ಲಿಕಾರ್ಜುನ ಕಳಸದಗುಡಿ, ಶಶಿಧರ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net