ರೋಗಿಗಳ ರಕ್ತದದ ಮಾದರಿ ಪ್ರಯೋಗಾಲಯಕ್ಕೆ ರವಾನೆ

Untitled design (26)
ಐದಬಾವಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ತಂಡ ರಕ್ತ ಮಾದರಿ ಸಂಗ್ರಹಿಸಿಕೊಳ್ಳುತ್ತಿರುವುದು.
Published on

ಗುರುಗುಂಟಾ: ಐದಬಾವಿ ಗ್ರಾಮಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಅಮರೇಶ ಪಾಟೀಲ್ ನೇತೃತ್ವದ ತಂಡ ಭೇಟಿ ನೀಡಿ, ಜ್ವರ ಕಾಣಿಸಿಕೊಂಡ ರೋಗಿಗಳ ರಕ್ತದ ಮಾದರಿಯನ್ನು ಬುಧವಾರ ಸಂಗ್ರಹಿಸಿತು.

ಜ್ವರ ಕಾಣಿಸಿಕೊಂಡ ಒಟ್ಟು 30 ಜನರ ಪೈಕಿ 15 ಜನರ ರಕ್ತದ ಮಾದರಿಯನ್ನು ರಾಯಚೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ದೇವರಭೂಪೂರು ಗ್ರಾಮ ಪಂಚಾಯಿತಿ ಗ್ರಾಮದಲ್ಲಿ ನೀರು ಸಂಗ್ರಹಣೆಗೊಂಡ ಸ್ಥಳ ಹಾಗೂ ಚರಂಡಿಯಲ್ಲಿ ಬ್ಲೀಚಿಂಗ್ ಪುಡಿ ಸಿಂಪಡಿಸಿ, ಫಾಗಿಂಗ್ ಮಾಡಿತು.
ಏ.3 ರಂದು ಐದಬಾವಿಯಲ್ಲಿ 20 ಜನರಿಗೆ ಡೆಂಘೆ? ತಲೆಬರಹದಡಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ರಕ್ತದ ಮಾದರಿಯನ್ನು ಸಂಗ್ರಹಿಸಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net