

ಹರಪನಹಳ್ಳಿ: ನೀರು ಮಾನವ ಕುಲಕ್ಕೆ ಜೀವಾಳವಾಗಿದೆ ಎಂದು ಕಮ್ಮತ್ತಹಳ್ಳಿ-ಪಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಅರಸೀಕೆರೆ ಗ್ರಾಮದ ದೊಡ್ಡ ಕೆರೆಗೆ ಬಾಗಿನ ಅರ್ಪಿಸಿ ಮಾತಾಡಿದರು. ವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಕೆರೆಗಳು ಹೆಚ್ಚುವರಿ ನೀರನ್ನು ಕೋಡಿಗಳ ಮೂಲಕ ಹರಿಯುತ್ತದೆ. ಇದರಿಂದ ಕೆರೆ ಭದ್ರವಾಗಿರಲು ಸಹಕಾರಿಯಾಗಿದೆ. ಆಪತ್ಕಾಲದಲ್ಲಿ ನೀರು ಅಮೃತದಂತಿದ್ದು, ಪ್ರತಿಯೊಬ್ಬರೂ ರಕ್ಷಣೆ ಮಾಡಬೇಕು. ಪ್ರಾಕೃತಿಕವಾಗಿ ತುಂಬಿದ ಕೆರೆಗಳು ಈ ಭಾಗದ ರೈತರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ ಎಂದರು.
ಯುವಕರು ಬೈಕ್ ರ‌್ಯಾಲಿ ನಡೆಸಿದರು. ಈ ಸಂದರ್ಭ ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಮುಖಂಡ ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಾಟೀಲ್, ಕಮ್ಮತ್ತಹಳ್ಳಿ ಮುರುಗೇಶ್, ಸಿದ್ದಪ್ಪ, ಕರಿಬಸಪ್ಪ, ಉಮಣ್ಣ, ಬಾಲೆನಹಳ್ಳಿ ಕೆಂಚನಗೌಡ, ಹೊಸಕೋಟೆ ಜಾತಪ್ಪ, ತೌಡೂರು ಮಂಜಯ್ಯ, ಶಿವಾನಂದಗೌಡ, ಅರಸೀಕೆರೆ ಬಸವರಾಜ, ಷಡ್ಕಪ್ಪ, ನವೀನ್, ಸಿದ್ದೇಶ್, ಬಾಬಣ್ಣ, ಅಜ್ಜಪ್ಪ, ಶ್ರೀನಿವಾಸ್, ಕೊಟ್ರೇಶ್ ಇತರರಿದ್ದರು.
ಸೆ.25-ಎಚ್‌ಆರ್‌ಪಿ-2: ಅರಸೀಕೆರೆ ಗ್ರಾಮದ ದೊಡ್ಡ ಕೆರೆಗೆ ಕಮ್ಮತ್ತಹಳ್ಳಿ -ಪಾಂಡೊಮಟ್ಟಿ ಶ್ರೀಗಳು ಹಾಗೂ ಅರಸೀಕೆರೆ ಶ್ರೀಗಳು ಬಾಗಿನ ಅರ್ಪಿಸಿದರು.