

ಲಕ್ಷ್ಮೇಶ್ವರ: ಜಗತ್ತಿನ ಶ್ರೇಷ್ಠ ಋಷಿಮುನಿಗಳಾಗಿದ್ದ ವೇದವ್ಯಾಸ ಮಹರ್ಷಿಗಳು ಜನಿಸಿದ ದಿನವಾಗಿರುವ ಈ ಪೌರ್ಣಿಮೆಯನ್ನು ಗುರುಪೌರ್ಣಿಮೆಯಾಗಿ ಆಚರಿಸುವ ಮೂಲಕ ಗುರುವಿನ ಸ್ಮರಣೆ ಮಾಡಲಾಗುತ್ತಿದೆ. ವ್ಯಕ್ತಿಯ ಬದುಕಿಗೆ ಸಂಸ್ಕಾರ, ಸದ್ವಿಚಾರ, ಸುಜ್ಞಾನ, ಸತ್ ಸಂಪ್ರದಾಯ, ಮಾನೀಯ ಮೌಲ್ಯಗಳನ್ನು ಬಿತ್ತಿ ಉತ್ತಮ ನಾಗರಿಕರನ್ನಾಗಿ ಮಾಡುವ ಗುರು ಸದಾ ಸ್ಮರಣೀಯ ಎಂದು ಶಿಕ್ಷಕಿ ನಿರ್ಮಲಾ ಅಡವಿ ಹೇಳಿದರು.
ಶ್ರೀಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಆಯೋಜಿಸಿದ್ದ ಪುಲಿಗೆರೆ ಪೌರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಏಕಲವ್ಯ ತನ್ನ ಗುರುಗಳಾದ ದ್ರೋಣಾಚಾರ್ಯರಿಗೆ ತನ್ನ ಬಲಗೈ ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ನೀಡಿದ ದಿನವಿದು. ಶಿವನು ಸಪ್ತ ಋಷಿಗಳಿಗೆ ಯೋಗಾಭ್ಯಾಸ ಮಾಡಿಸಿದ ದಿನ. ಬೌದ್ಧ ಧರ್ಮದ ಗುರುಗಳಾದ ಗೌತಮ ಬುದ್ಧರು ತನ್ನ ಅನುಯಾಯಿಗಳಿಗೆ ಪ್ರಥಮ ಭೋಧನೆ ನೀಡಿದ ಶ್ರೇಷ್ಠ ದಿನವೂ ಇದಾಗಿದೆ’ ಎಂದರು.
ಸಿಡಿಪಿಒ ಮೃತ್ಯಂಜಯ ಗುಡ್ಡದಾನ್ವೇರಿ ಮಾತನಾಡಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನೀಡಿದ ಕಾಯಕ ರತ್ನ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಪೂರ್ಣಾಜಿ ಖರಾಟೆಯವರನ್ನು ಟ್ರಸ್ಟ್ ಕಮಿಟಿ ಮತ್ತು ತಾಲೂಕು ವೈಜ್ಞಾನಿಕ ಸಂಶೋಧನಾ ಪರಿಷತ್ ಘಟಕದ ಪದಾಧಿಕಾರಿಗಳು ಸನ್ಮಾನಿಸಿದರು.
ಚಂಬಣ್ಣಾ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಓದುನವರ, ಪಾರ್ವತಿ ಕಳ್ಳಿಮಠ, ಸುರೇಶ ರಾಚನಾಯ್ಕರ, ಸಿದ್ದನಗೌಡ ಬಳ್ಳೊಳ್ಳಿ, ವಿರೂಪಾಕ್ಷಪ್ಪ ಆದಿ, ಬಸವರಾಜ ಪುಠಾಣಿ, ನೀಲಪ್ಪ ಕರ್ಜಕ್ಕಣ್ಣನವರ, ಎನ್.ಆರ್.ಸಾತಪೂತೆ, ಬಿ.ಎಸ್. ಈಳಗೇರ, ಎಚ್.ಜಿ. ದುರಗಣ್ಣವರ, ಸೋಮಣ್ಣ ಅಣ್ಣಿಗೇರಿ, ವೀರಣ್ಣ ಅಕ್ಕೂರ, ಸಂತೋಷ ಸಾತಪೂತೆ, ಪಿ.ಸಿ. ಕಾಳಶೆಟ್ಟಿ, ಶ್ರೀಪಾಲ ಗೊಂಗಡಿ, ಬಸವರಾಜ ಹೆಬ್ಬಾಳ, ಬಸವರಾಜ ಮೆಣಸಿನಕಾಯಿ, ಎನ್.ಎ. ತಹಶೀಲ್ದಾರ, ಎನ್.ಎಸ್. ಗೊರವರ, ಮಾಲಾ ದಂಧರಗಿ, ಸುಮಾ ಚೊಟಗಲ್, ವಿ.ಎಫ್. ಯಲಿಶಿರೂಂದ ಇತರರಿದ್ದರು. ಸೋಮಶೇಖರ ಕೆರಿಮನಿ, ಜಯಪ್ರಕಾಶ ಹೊಟ್ಟಿ, ಸ್ನೇಹಾ ಹೊಟ್ಟಿ ,ಜಿ.ಎಸ್.ಗುಡಗೇರಿ ನಿರ್ವಹಿಸಿದರು.