ಕನ್ಯಾನದಲ್ಲಿ ಗುರುವಂದನಾ ಕಾರ್ಯಕ್ರಮ

hbr (3)
Published on

ಹೆಬ್ರಿ: ಕನ್ಯಾನ ಶಾಲೆ ಹಳೇ ವಿದ್ಯಾರ್ಥಿ ಸಂ ವತಿಯಿಂದ ಗುರುಗಳಾದ ಶಿವಪುರ ನಾರಾಯಣ ಅಡಿಗ, ಕೆರೆಬೆಟ್ಟು ಜಯರಾಮ್ ಶೆಟ್ಟಿ ಅವರ ಸ್ವಗ್ರಹಕ್ಕೆ ತೆರಳಿ ಗುರುವಂದನೆ ಸಲ್ಲಿಸಲಾಯಿತು.

ಸಂದ ಅಧ್ಯಕ್ಷ ಎಚ್.ಕೆ.ಸುಧಾಕರ್ ವಾತನಾಡಿ, ಉತ್ತಮ ಶಿಕ್ಷಕರ ವೃಂದ ದೊರೆತದ್ದರಿಂದ ಸವಾಜದಲ್ಲಿ ನಾವೆಲ್ಲರೂ ಉತ್ತಮ ಸ್ಥಾನದಲ್ಲಿದ್ದೇವೆ. ಜೀವನದಲ್ಲಿ ಕಷ-ಸುಖಗಳನ್ನು ಎದುರಿಸಿ ಬಾಳಲು ಕಲಿಸಿದ ಗುರುಗಳಿಗೆ ನುಡಿನಮನ ಸಲ್ಲಿಸಿದರು.

ಪ್ರಮುಖರಾದ ವಿಶ್ವನಾಥ ನಾಯಕ್, ಸಂತೋಷ್ ನಾಯಕ್, ಅರುಣ್ ಶೆಟ್ಟಿ, ರವೀಂದ್ರ ಶೆಟ್ಟಿ, ಚಂದ್ರ ಶೆಟ್ಟಿ, ಅಮಿತಾ, ಸುಮಿತ್ರಾ, ದೇವು.ಕೆ, ಪ್ರವೀಣ್ ಶೆಟ್ಟಿ ಹಾಜರಿದ್ದರು. ಕಾರ್ಯದರ್ಶಿ ಶ್ರೀಧರ್ ಶೆಟ್ಟಿ ನಿರೂಪಿಸಿದರು. ಯಶೋದಾ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net