ಚಾರ್ಮಕ್ಕಿ ಶಾಲೆಯಲ್ಲಿ ಗುರುವಂದನೆ ಕಾರ್ಯಕ್ರಮ

SID
Published on

ವಿಜಯವಾಣಿ ಸುದ್ದಿಜಾಲ ಆರ್ಡಿ ಆರ್ಡಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಂದನೆ, ಗುರು ಸನ್ಮಾನ ಹಾಗೂ ಸ್ನೇಹ ಸಮ್ಮಿಲನ ಧನ್ಯೋನ್ಸಮಿ ಕಾರ್ಯಕ್ರಮ ಭಾನುವಾರ ಜರುಗಿತು. ಹಳೇ ವಿದ್ಯಾರ್ಥಿ ಗಣಪತಿ ಶೆಟ್ಟಿ ಬೆಪ್ಡೆ ಅವರು ಯಕ್ಷಗಾನ ಪದಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 1998, 1999 ಹಾಗೂ 2000ನೇ ಸಾಲಿನ ವಿದ್ಯಾರ್ಥಿಗಳು ತಮಗೆ ಶಿಕ್ಷಕರಾಗಿದ್ದವರಿಗೆ ಗುರುವಂದನೆ ಸಲ್ಲಿಸಿದರು. ಬಳಿಕ ತಮ್ಮ ಶಾಲಾ ದಿನಗಳ ಕ್ಷಣಗಳನ್ನು ಸ್ಮರಿಸಿದರು. ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಉಪ ಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕಾವಡಿ, ನಿವೃತ ಶಿಕ್ಷಕರಾದ ಬಾಬು ಶೆಟ್ಟಿ ಜಗ್ಲುಗುಡ್ಡೆ, ಚಿನ್ನಯ್ಯ ಹೆಗ್ಡೆ ಕೆರ್ಜಾಡಿ, ಶಿವರಾಮ ಶೆಟ್ಟಿ ಬೆಪ್ಡೆ, ರುನಾಥ ಶೆಟ್ಟಿ ಗುಂಡಕಲ್ಲು ಮಡಾಮಕ್ಕಿ, ಪ್ರಮುಖರಾದ ಜಯದೇವ ಹೆಗ್ಡೆ ನೂಜಟ್ಟು, ಸುರೇಶ್ ಶೆಟ್ಟಿ ಆರ್ಡಿ, ರತ್ನಾಕರ ಶೆಟ್ಟಿ ತೂಂಬಿನಕೆರೆ, ಶ್ರೀಕಾಂತ್, ಹೇಮಲತಾ, ದೀಪಾ ಶೆಟ್ಟಿ, ಚಂದ್ರಶೇಖರ ನಾಯ್ಕ ಮರೂರು, ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂತೋಷ ಶೆಟ್ಟಿ ಆರ್ಡಿ ಸ್ವಾಗತಿಸಿದರು. ಸರಿತಾ ಅಲ್ಬಾಡಿ, ಜ್ಯೋತಿ ಬೆಪ್ಡೆ, ವೀಣಾ ಶಿರಂಗೂರು ಪ್ರಾರ್ಥಿಸಿದರು. ಉಮೇಶ್ ಆರ್ಡಿ ವಂದಿಸಿದರು. ಗಣೆೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.

ನಿವೃತ ಶಿಕ್ಷಕರಿಗೆ ಗುರುವಂದನೆ

ಹಳೇ ವಿದ್ಯಾರ್ಥಿಗಳ ವತಿಯಿಂದ ನಿವೃತ ಶಿಕ್ಷಕರಾದ ರುರಾಮ ಶೆಟ್ಟಿ ವಾಬ್ಳಿ, ರಾಜೀವ ಶೆಟ್ಟಿ ಬೆಪ್ಡೆ, ಮಂಜಯ್ಯ ಶೆಟ್ಟಿ ವಂಡ್ಸೆ, ಉದಯ ಗಾಂವ್ಕರ್, ಸಹ ಶಿಕ್ಷಕಿ ರಾಜಶ್ರೀ ನಾಯರ್, ಜಯಶ್ರೀ ಶೆಟ್ಟಿ ಕೆರ್ಜಾಡಿ, ಬಾಲಕಷ್ಣ ಶೆಟ್ಟಿ ಅರಸಮ್ಮಕಾನು ಅವರಿಗೆ ಗುರು ವಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ಬಳಿಕ ಗುವಾಸ್ತ ಜಗದೀಶ ಬ್ರಹ್ಮಾವರ, ಜವಾನ ಸಾಂಕ್ಲಿ ನಾಯ್ಕ ಕಲ್ಮರ್ಗಿ ಅವರ ಸೇವೆ ಗುರುತಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net