ಜಿಜಿಎಂಎಸ್​ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ

17 10 2025_BGR_RURAL-PAGE_5A
ಹೊಸಕೋಟೆಯ ಮಾರುತಿ ಸಭಾಭವನದಲ್ಲಿ ಜಿಜಿಎಂಎಸ್​ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 26 ಶಿಕ್ಷಕರಿಗೆ ಗುರುವಂದನಾ ಸಲ್ಲಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಮೋಹನ್​ ಮೌರ್ಯ, ಸತೀಶ್​, ಸೋಮಶೇಖರ್​, ನಾಗೇಂದ್ರ, ಪುರುಷೋತ್ತಮ್​, ಮಧು ಮಹೇಂದ್ರ, ಶಿವಶಂಕರ ಆಚಾರಿ, ಪಿಳ್ಳೆಗೌಡ, ಬಾಲಾಜಿ, ನವೀನ್​, ಹರೀಶ್​, ವಿಜಯ್​ ಕುಮಾರ್​, ದೇವರಾಜ್​, ತಿರುಮಲೇಶ್​, ಜನಾರ್ದನ್​, ವಿಶ್ವನಾಥ, ನರಸಿಂಹ, ಬೈರಾಜು, ರಮೇಶ್​, ಕೆಂಪರಾಜು, ಮಂಜುನಾಥ್​, ಅಶೋಕ್​ ಇತರರು ಇದ್ದರು
Published on

ಹೊಸಕೋಟೆ : ವಿದ್ಯೆ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದಲ್ಲದೆ ಶಾಲೆಗೆ ನೆರವಿನ ಹಸ್ತ ಚಾಚುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗುವುದೇ ಗುರುವಂದನೆಯಾಗಿದೆ ಎಂದು ನಿವೃತ್ತ ಶಿಕ್ಷಕ ನಂಜುಂಡರೆಡ್ಡಿ ತಿಳಿಸಿದರು. ನಗರದ ಮಾರುತಿ ಸಭಾಭವನದಲ್ಲಿ ಆಯೋಜಿಸಿದ್ದ ಜಿಜಿಎಂಎಸ್​ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹ ಸಂಗಮ ಹಾಗೂ ವಿದ್ಯಾರ್ಥಿಗಳಿಗೆ 160 ಸ್ಕೂಲ್​ ಬ್ಯಾಗ್​ ಹಾಗೂ ಪಠ್ಯಪರಿಕರ ಲೇಖನ ಸಾಮಾಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ಎಂದರೆ ಕೇವಲ ಅಕ್ಷರ ಕಲಿಸುವುದಲ್ಲ. ಸಂಸ್ಕಾರ, ದೇಶಸೇವೆ, ಸ್ನೇಹಭಾವ ಸೇರಿದ ವ್ಯಕ್ತಿತ್ವ ರೂಪಿಸುವುದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು, ವಿದ್ಯಾರ್ಥಿಗಳೂ ನಡೆದುಕೊಳ್ಳಬೇಕು. ವಿದ್ಯೆ ಕಲಿತ ಶಾಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿರುವುದು ನಿಜಕ್ಕೂ ಅವಿಸ್ಮರಣೀಯ ಎಂದರು.

ಹಳೆಯ ವಿದ್ಯಾರ್ಥಿ ವಕೀಲ ರವಿಕುಮಾರ್​ ಮಾತನಾಡಿ, 8 ತಿಂಗಳ ಕಾಲ ಸಂಪರ್ಕ ಬೆಳೆಸಿ ಒಬ್ಬೊಬ್ಬರಿಂದ ವಿಳಾಸ, ದೂರವಾಣಿ ಸಂಖ್ಯೆ ಪಡೆದು ಆ ಮೂಲಕ ಕೆಲವು ಶಿಕ್ಷಕರು ಹೊರ ಜಿಲ್ಲೆಗಳಲ್ಲಿದ್ದು, ಅವರನ್ನು ಸಂಪರ್ಕಿಸಿ 150 ವಿದ್ಯಾರ್ಥಿಗಳ ಒಟ್ಟಾಗಿ ಕಾರ್ಯಕ್ರಮ ಆಯೋಜಿಸಿ ಗುರುವಂದನೆ ಜತೆಗೆ ಶೈಕ್ಷಣಿಕ ಪ್ರಗತಿಗೆ ನೆರವಾಗಿದ್ದೇವೆ. ಅಲ್ಲದೆ ಈ ವೇಳೆ ವಿಧಿವಶರಾಗಿರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಲಾಯಿತು ಎಂದು ಹೇಳಿದರು.

ಸ್ನೇಹ ಸಂಗಮ : ಜಿಜಿಎಂಎಸ್​ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ&ಸ್ನೇಹ ಸಂಗಮ ಆಯೋಜನೆ ಇದೊಂದು ಐತಿಹಾಸಿಕ ದಾಖಲೆ ಕಾರ್ಯಕ್ರಮವಾಗಿದ್ದು, 150 ವಿದ್ಯಾರ್ಥಿಗಳು ಮತ್ತು 26 ಶಿಕ್ಷಕರು ಹಾಗೂ ಕುಟುಂಬದವರು ಒಟ್ಟಿಗೆ ಬೆರೆತು ಪರಸ್ಪರ ಸ್ನೇಹ ಭಾವನೆ ಹಂಚಿಕೊಂಡು ಸಂಬಂಧ ವೃದ್ಧಿ ಜತೆಗೆ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net