ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ

Guru Vandana from alumni
ಜಮಖಂಡಿಯ ಸರ್ಕಾರಿ ಪರುಶರಾಮಬಾಹು ಪ್ರೌಢಶಾಲೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗುರುವಂದನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳು ಇದ್ದರು.
Published on

ಜಮಖಂಡಿ : ನಗರದ ಸರ್ಕಾರಿ ಪರುಶುರಾಮ ಬಾಹು ಪ್ರೌಢಶಾಲೆ ಸಭಾ ಭವನದಲ್ಲಿ ಗುರುವಂದನ ಮತ್ತು ಮರಾಠಿ ಭಾಷಿಕ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಕಾರ್ಯಕ್ರಮ ಜರುಗಿತು.

1997-98ನೇ ಸಾಲಿನಲ್ಲಿ ಮರಾಠಿ ಭಾಷೆಯಲ್ಲಿ ಶಿಕ್ಷಣ ಪಡೆದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ 27 ವರ್ಷದ ನಂತರ ಶಿಕ್ಷಕರಿಗೆ ಗುರುವಂದನ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಸ್ನೇಹಸಮ್ಮೇಳನ ಆಚರಿಸಿದರು.

ನಿವೃತ್ತ್ತ ಶಿಕ್ಷಕರಾದ ಎನ್.ಕೆ. ಕುಲಕರ್ಣಿ, ಜಹೀರಾ ಬಾಗವಾನ ಸಹಿತ ಹಲವರಿಗೆ ಗುರುವಂದನೆ ಸಲ್ಲಿಸಿದರು. ಹಿರಿಯ ಸಾಹಿತಿ, ನ್ಯಾಯವಾದಿ ತಾತಾಸಾಹೇಬ ಬಾಂಗಿ, ಸುರೇಶ ಬೋಸಲೆ, ಪ್ರಕಾಶ ಅರಕೇರಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.

ಹಳೆ ವಿದ್ಯಾರ್ಥಿಗಳಾದ ಸಂಪದಾ ಚಿಗರಿ, ನೂತನ ಬೋಸಲೆ, ಅಶ್ವಿನಿ ಪತಂಗೆ, ಸುನೀಲ ಶಿಂಧೆ, ಗುರುಬಕ್ಷ ಧರ್ಮದಾಸಾನಿ, ದೀಪಕ ಸಾಳುಂಕೆ, ವಿಜಯ ಜಾಧವ, ಹುಸೇನ ಶೇಖ, ಪ್ರದೀಪ ಗಣಾಚಾರಿ, ಸಂದೀಪ ಝಾಡ, ಪ್ರಶಾಂತ ನಲಗೆ ಹಾಗೂ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net