

ಮುನವಳ್ಳಿ: ನಿಜವಾದ ಶಿಕ್ಷಕರು ನಿಸ್ವಾರ್ಥ ಸೇವೆ ಮೂಲಕ ವಿದ್ಯಾರ್ಥಿಗಳ ಬಾಳಿನ ಬೆಳಕಾಗುತ್ತಾರೆ ಎಂದು ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಸೋಮಶೇಖರಮಠದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಮುರುಘೇಂದ್ರ ಸ್ವಾಮೀಜಿ ಕೊಡುವ ಶ್ರೇಷ್ಠ ಗುರು ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ಉದ್ಘಾಟಿಸಿ ಮಾತನಾಡಿದರು. ಶ್ರೇಷ್ಠ ಗುರು ಪ್ರಶಸ್ತಿಗೆ ಭಾಜನರಾದ ಎಸ್.ಬಿ. ಹಿರಲಿಂಗಣ್ಣವರ, ಎಂ.ಎಚ್.ಪಾಟೀಲ, ಬಿ.ಬಿ. ಹುಲಿಗೊಪ್ಪ, ವಿ.ವಿ.ಕೊಳಕಿ, ವೈ.ಪಿ.ಮಾದರ, ಸಿ.ಎಂ.ಗೊಬ್ಬರಗುಂಪಿ ಅವರನ್ನು ಸನ್ಮಾನಿಸಲಾಯಿತು.
ಮಂಜುನಾಥ ಭಂಡಾರಿ, ವೀರಭದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಜಮಖಂಡಿ, ಸಂಜೀವಕುಮಾರ ಕಾಮಣ್ಣವರ, ಶಂಕರ ಗಯ್ಯಳಿ, ಈರಣ್ಣ ಸಂಕಣ್ಣವರ, ಗಂಗಾಧರ ಗೊರಾಬಾಳ, ಪ್ರಾಚಾರ್ಯ ಕೆ.ಬಿ.ನಲವಡೆ. ಐ.ಕೆ.ಮಠಪತಿ, ಶೇಖರ ಮುಪ್ಪಿನವರಮಠ, ಜಗದೀಶ ಹಿರೇಮಠ ಇತರರಿದ್ದರು.
ಕೋ.ಶಿವಾಪುರ ವರದಿ: ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಗುರುವಾರ ಶಿಕ್ಷಕರ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕ ಮಂಜುನಾಥ ಕುಡ್ಲಿಂಗಪ್ಪಗೋಳ, ಡಾ.ಬಿ.ಕೆ. ಪಡೆಪ್ಪನವರ, ರತ್ನಾ ಸವದತ್ತಿ, ಸವಿತಾ ನಿಲಜಿ, ಸರಸ್ವತಿ ಚಿಗರಿ, ರತ್ನಾ ದ್ಯಾವಣಸಿ ಇತರರಿದ್ದರು.