

ನರಗುಂದ: ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿದ ಕೀರ್ತಿ ಆದಿ ಶಂಕರಾಚಾರ್ಯರಿಗೆ ಸಲ್ಲುತ್ತದೆ. 8ನೇ ವಯಸಿನಲ್ಲಿ ವೇದ ಉಪನಿಷತ್ತುಗಳನ್ನು ಕಂಠಪಾಠ ಮಾಡಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ ಆಧ್ಯಾತ್ಮಿಕ ಲೋಕ ಹಾಗೂ ಇಡೀ ಮನುಕುಲಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶಿರೋಳದ ಅಭಿನವ ಶ್ರೀ ಯಚ್ಚರ ಸ್ವಾಮೀಜಿ ಹೇಳಿದರು.
ತಾಲೂಕಿನ ಶಿರೋಳ ಗ್ರಾಮದ ಜಗದ್ಗುರು ಶ್ರೀಯಚ್ಚರ ಸ್ವಾಮಿಗಳ ಗವಿಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀಮಠದ 19ನೇ ಮಾಸಿಕ ಶಿವಾನುಭವದಲ್ಲಿ ಅವರು ಮಾತನಾಡಿದರು. ‘ಇಡೀ ಮನುಕುಲವನ್ನು ಆದಿ ಶ್ರೀ ಶಂಕರಾಚಾರ್ಯರು ಉದ್ಧಾರಗೊಳಿಸಿದ್ದಾರೆ’ ಎಂದರು.
ಹೊಳೆ-ಆಲೂರಿನ ಪ್ರವಚನಕಾರ ಪ್ರಲ್ಹಾದ ಮುಂಡಾಸದ ಮಾತನಾಡಿ, ಮನುಷ್ಯ ಆಧ್ಯಾತ್ಮಿಕ ಜೀವನದಲ್ಲಿ ಸಾಗಿದರೆ ಲೌಕಿಕ ಜೀವನದಲ್ಲಿ ಬರುವ ಪ್ರತಿಯೊಂದು ತೊಂದರೆಗಳಿಂದ ದೂರವಾಗಬಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಜನರು ಸತ್ಸಂಗದಲ್ಲಿ ಪಾಲ್ಗೊಂಡು ತಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದರು.
ಬಾಪುಗೌಡ ತಿಮ್ಮನಗೌಡ್ರ ಮಾತನಾಡಿದರು. ಶಿಕ್ಷಕ ಮಲ್ಲಪ್ಪ ಕುರಿಯವರ, ಕುಳಗೇರಿಯ ವಿಶ್ವಭಾರತಿ ವಿದ್ಯಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಂಗಮೇಶ ಕಮ್ಮಾರ, ತೇಜಪ್ಪಚಾರ್ಯ ಮೂಖಿ, ಎಂ.ಎಂ. ಉಗರಗೊಳ, ಬಸವರಾಜ ಕುಪ್ಪಸ್ತ, ಮಲ್ಲಪ್ಪ ಚಿಕ್ಕನರಗುಂದ, ಪಾಂಡುರಂಗ ಪತ್ತಾರ ಸಂಗೀತ ಸೇವೆ ನೀಡಿದರು. ಎಸ್.ವೈ. ಮುಲ್ಕಿಪಾಟೀಲ ಸ್ವಾಗತಿಸಿದರು. ಸುನೀಲ ಕಳಸದ ನಿರೂಪಿಸಿದರು.