

ಜಮಖಂಡಿ:ಬದುಕಿನಲ್ಲಿ ಯಶಸ್ಸು ಸಿಗಬೇಕಾದರೆ ಅಧ್ಯಾತ್ಮ ಮತ್ತು ಗುರು ಅವಶ್ಯಕ. ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯಲು ಅಧ್ಯಾತ್ಮ ಮುಖ್ಯ ಎಂದು ಮುತ್ತೂರಿನ ರಾಚೋಟೇಶ್ವರ ಮಠದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.ನಗರದ ಮುತ್ತಿನಕಂತಿ ಹಿರೇಮಠದಲ್ಲಿ ಮಹಾಲಕ್ಷ್ಮಿಮಹಿಳಾ ಮಂಡಳಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ದೇವಿ ಪುರಾಣ ಮತ್ತು ಪ್ರವಚನ ಕಾರ್ಯಕ್ರಮದಲ್ಲಿ ಸದ್ವಿಚಾರ ಸಂಸತಿಯ ಸಮಾಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರವಚನ ಕೇಸರಿ ನಾವಲಗಿಯ ಶ್ರೀಶೈಲ ಶ್ರೀಗಳು ಮಾತನಾಡಿ, ಮನುಷ್ಯ ಅಧ್ಯಾತ್ಮ, ಆಚಾರ, ವಿಚಾರ, ಸಂಸತಿ, ಧರ್ಮಪಾಲನೆ ಮಾಡಬೇಕು. ಬ್ರಹ್ಮ ನೀಡಿದ ವರದಿಂದ ದೈತ್ಯ ಮಹಿಷಾಸುರನ ತನ್ನ ದರ್ಪ ಸಾಧಿಸುತ್ತಿರುವಾಗ ಹೆಣ್ಣಿನಿಂದ ತನ್ನ ಸಾವು ಬರಬಾರದು ಎಂದು ಮರೆತ ಅವನಿಗೆ ಆ ತಾಯಿಯಿಂದ ಅವನ ವಧೆಯಾಯಿತು ಎಂದು ಹೇಳಿದರು.
ಡಾ. ಎಚ್.ಜಿ. ದಡ್ಡಿ, ಪ್ರೊ. ಶ್ರೀನಿವಾಸ ಕಟ್ಟಿಮನಿ ಮಾತನಾಡಿದರು. ಮಹಾಲಕ್ಷ್ಮಿ ಮಹಿಳಾ ಮಂಡಳದ ಬಾಲಕಿಯರಿಂದ ವಿಶೇಷ ಮಹಿಷಾಸುರ ವಧೆ ನೃತ್ಯ, ಶಿವಾನಿ ನಾಗರೇಶಿಯಿಂದ ಭರತನಾಟ್ಯ ಪ್ರದರ್ಶಿದಳು. ಹುನ್ನೂರಿನ ಶಿವಪುತ್ರಯ್ಯ ಸಿದ್ದಗಿರಿಮಠ, ಕಾನಿಪ ಸಂದ ಅಧ್ಯ ಲಕ್ಷಿ$್ಮಕಾಂತ ದುದಗಿ, ದಶರಥ ವಾಗೆನ್ನವರ, ಮಲ್ಲು ಚನವೀರ ಇತರರಿದ್ದರು.ರೂಪಾ ನಂದಗಾಂವ ಪ್ರಾಸ್ತಾವಿಕವಾಗಿ ಮಾತನಾಡಿದರು, ಮೈತ್ರಾ ಅರಕೇರಿ ಪ್ರಾರ್ಥಿಸಿದರು, ಮೀನಾ ಕತ್ತಿ ಸ್ವಾಗತಿಸಿದರು, ಸುನಿತಾ ನಂದಗಾಂವ ನಿರೂಪಿಸಿ, ವಂದಿಸಿದರು.
ಜಮಖಂಡಿ ನಗರದ ಮುತ್ತಿನಕಂತಿ ಮಠದಲ್ಲಿ ಮಹಾಲಕ್ಷ್ಮಿಮಹಿಳಾ ಮಂಡಳ ಸಹಯೋಗದಲ್ಲಿ ಶ್ರೀದೇವಿ ಪುರಾಣ ಮತ್ತು ಪ್ರವಚನ ನಾವಲಗಿಯ ಶ್ರೀಶೈಲ ಶ್ರೀಗಳು ನೀಡಿದರು.