ಸಿದ್ಧಾರೂಢ ಮಠದಲ್ಲಿ ಗುರುಪೂರ್ಣಿಮೆ, ಪಲ್ಲಕ್ಕಿ ಉತ್ಸವ

IMG-20240721-WA0208-1.jpg
Published on

ಹುಬ್ಬಳ್ಳಿ: ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಭಾನುವಾರ ಗುರು ಪೂರ್ಣಿಮೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಬೆಳಗ್ಗೆ 6ಕ್ಕೆ ಕಾಕಡಾರತಿ ಪೂಜೆ ನಂತರ ಅಭಿಷೇಕ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.

ಸಂಜೆ 7ಕ್ಕೆ ಶ್ರೀಗಳ ಮಂದಿರದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಭಕ್ತ ಸಮೂಹದ ಮಧ್ಯೆ ನಡೆಯಿತು.

ನಂತರ ನಡೆದ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಚಿಕ್ಕನಂದಿ ಸಿದ್ಧಾರೂಢ ದರ್ಶನ ಪೀಠದ ಶ್ರೀ ಸಹಜಾನಂದ ಸ್ವಾಮೀಜಿ, ಪ್ರತಿಯೊಬ್ಬ ಮನುಷ್ಯನಿಗೆ ಗುರುವಿನ ಉಪದೇಶ ಅಗತ್ಯ. ಗುರುವಿನಿಂದ ಜ್ಞಾನ ಸಂಪಾದನೆ ಮಾಡಿ ಜೀವನ ಪರಿರ್ಪೂಣವಾಗಿ ನಡೆಸಬೇಕಾದರೆ ಉಪದೇಶ ಮುಖ್ಯವಾಗಿದೆ ಎಂದರು.

ಶಿವಾನಂದ ಮಠದ ಶ್ರೀ ಬಸವರಾಜ ಸ್ವಾಮೀಜಿ ಮಾತನಾಡಿ, ಗುರುವಿನ ಉಪದೇಶ ಆಗದ ಹೊರತು ಮನುಷ್ಯ ಪರಿಪೂರ್ಣವಾಗಲಾರ ಎಂದರು.

ರನ್ನಬೆಳಗಲಿಯ ಶ್ರೀ ಸದಾಶಿವ ಗುರೂಜಿ, ಬೆಳಹೊಡದ ಶ್ರೀ ಪರಿಪೂರ್ಣಾನಂದ ಸ್ವಾಮೀಜಿ, ಶ್ರೀ ಆತ್ಮಾನಂದ ಸ್ವಾಮೀಜಿ, ಶ್ರೀಶಾಂತಾನಂದ ಸ್ವಾಮೀಜಿ, ಇತರ ಮಠಾಧೀಶರನ್ನು ಸನ್ಮಾನಿಸಲಾಯಿತು.

ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು.
ಡಾ. ಗೋವಿಂದ ಮಣ್ಣೂರ, ಬಾಳು ಮಗಜಿಕೊಂಡಿ, ಚನ್ನವಿರ ಮುಂಗರವಾಡಿ, ಉದಯಕುಮಾರ ನಾಯ್ಕ, ವಿನಾಯಕ ಘೋಡ್ಕೆ, ಗೀತಾ ಕಲಬುಗಿರ್, ಈರಣ್ಣ ತುಪ್ಪದ ಇತರರು ಇದ್ದರು.

ಧರ್ಮದರ್ಶಿ ಶಾಮಾನಂದ ಪೂಜೇರಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಐ. ಕೋಳಕೂರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net