ಗುರುಪೂರ್ಣಿಮೆಗಿದೆ ಧಾರ್ಮಿಕ ಮಹತ್ವ

HUN-JULY-11-3(GURUPOORNIMA PROGRAMME)
Published on

ಹುಣಸೂರು: ಗುರುಪೂರ್ಣಿಮೆಗೆ ಧಾರ್ಮಿಕ ಮತ್ತು ಶೈಕ್ಷಣಿಕ ಮಹತ್ವವಿದೆ ಎಂದು ಅಖಿಲ ಭಾರತೀಯ ಅಧಿವಕ್ತ ಪರಿಷತ್(ಎಬಿಎಪಿ)ನ ತಾಲೂಕು ಅಧ್ಯಕ್ಷ ವೀರೇಶ್‌ರಾವ್ ಬೋಬಡೆ ಅಭಿಪ್ರಾಯಪಟ್ಟರು.

ಗುರುವಾರ ನಗರದ ಹುಣಸೂರು ಸಾಂಸ್ಕೃತಿಕ ಕೇಂದ್ರದ ವೇದಿಕೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಬಿ.ಎಸ್.ಯೋಗಾನಂದ್‌ಕುಮಾರ್ ಮತ್ತು ನಿವೃತ್ತ ಶಿಕ್ಷಕ ವಿ.ಎನ್.ದಾಸ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಬೌದ್ಧರು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಯೋಗ ಸಂಪ್ರದಾಯದಲ್ಲಿ ಶಿವನು ಸಪ್ತರ್ಷಿಗಳಿಗೆ ಯೋಗವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ. ಜೀವನದ ಅಂಧಕಾರವನ್ನು ಕಳೆಯುವ ಶಕ್ತಿ ಮತ್ತು ವ್ಯಕ್ತಿ ಗುರುವಾಗಿದ್ದು, ನಿರ್ದಿಷ್ಟ ಗುರಿ ಮತ್ತು ಅದರ ಹಿಂದೆ ತಿಳಿಹೇಳುವ ಗುರುವಿದ್ದಲ್ಲಿ ಸಾಧನೆಯ ಶಿಖರವೇರಲು ಸಾಧ್ಯ ಎಂದರು.

ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ವಕೀಲ ಕೆ.ರಾಜು, ಮಹಿಳಾ ಉಪಾಧ್ಯಕ್ಷೆ ಪವಿತ್ರಾ, ವಕೀಲ ಲಕ್ಷ್ಮೀಕಾಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net